ಕೊಲ್ಲೂರು : ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದ ದಳಿ ಪ್ರದೇಶದಲ್ಲಿ ದನ ಕಳವು ಹಾಗೂ ಅಕ್ರಮ ಸಾಗಾಟಕ್ಕೆ ಸಂಬಂಧಿಸಿದ ಘಟನೆ ಬೆಳಗಿನ ಜಾವ ಬೆಳಕಿಗೆ ಬಂದಿದೆ.
ರಾತ್ರಿ ಸುಮಾರು 11.00 ಗಂಟೆಯಿಂದ ಬೆಳಿಗ್ಗೆ ಜಾವ 6.00 ಗಂಟೆಯ ಮಧ್ಯೆ ಅವಧಿಯಲ್ಲಿ, ಯಾರೋ ದುಷ್ಕರ್ಮಿಗಳು ಮಾಂಸಕ್ಕಾಗಿ ದನವನ್ನು ಕಳವು ಮಾಡಿಕೊಂಡು ಸಾಗಿಸುತ್ತಿದ್ದ ವೇಳೆ ಯಾವುದೋ ಕಾರಣಕ್ಕೆ ಭಯಗೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ ಸಂದರ್ಭ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಈ ವೇಳೆ ರಾಷ್ಟ್ರೀಯ ಹೆದ್ದಾರಿಯ ಮುಖ್ಯ ರಸ್ತೆಯಿಂದ ಸ್ವಲ್ಪ ದೂರದಲ್ಲಿರುವ ಕೊಲ್ಲೂರು ಗ್ರಾಮದ ದಳಿ ಪ್ರದೇಶದ ಶ್ರೀಧರ್ ಭಟ್ ಎಂಬವರ ಹಳೆಯ ಮನೆಯ ಸಮೀಪದ ತೋಟದ ಜಾಗದ ಕಚ್ಚಾ ರಸ್ತೆಗೆ ಕಾರನ್ನು ತಿರುಗಿಸಿದಾಗ ವಾಹನ ಜಖಂಗೊಂಡಿದ್ದು, ಕಾರಿನಲ್ಲಿದ್ದ ದನ ಸಾವನ್ನಪ್ಪಿದೆ.
ಈ ಸಂಬಂಧ ಗೋಪಾಲ (54) ಎಂಬುವರು ದೂರು ನೀಡಿದ್ದು, ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



