ದೆಹಲಿ: ದೇಶದಲ್ಲಿ ಗಲಭೆ ಎಬ್ಬಿಸಲು ವಿದೇಶಿ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ರಾಯಚೂರಿನ ಟೀ ಸ್ಟಾಲ್ ಮಾಲೀಕ ಮೊಹಮ್ಮದ್ ಶಾಹಿಲ್ (24) ಎಂಬಾತನನ್ನು ಸದರಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ‘ರಾಣಾ ಭಾಯ್’ ಎಂಬ ಹೆಸರಿನ ಅರಬ್ ಮೂಲದ ವಿದೇಶಿ ವ್ಯಕ್ತಿಯ ಪೋಸ್ಟ್‌ಗಳಿಂದ ಪ್ರಭಾವಿತನಾಗಿದ್ದ ಶಾಹಿಲ್, ಆತನೊಂದಿಗೆ ಚಾಟಿಂಗ್ ನಡೆಸಿ ಮೈಂಡ್‌ವಾಶ್‌ಗೊಳಗಾಗಿದ್ದ.
ಮೆಸೇಜ್ ಮೂಲಕ ಪಿಸ್ತೂಲ್ ನೀಡುವಂತೆ ವಿನಂತಿಸಿದ್ದ. ಜುಲೈ 14ರಿಂದ ವಾಟ್ಸಾಪ್ ಮೂಲಕ ಸಂಪರ್ಕದಲ್ಲಿದ್ದ ಇಬ್ಬರ ನಡುವೆ ಗಲಭೆ ಎಬ್ಬಿಸುವ ಕುರಿತು ಚರ್ಚೆಯಾಗಿತ್ತು. ಗಲಭೆ ಸೃಷ್ಟಿಸಲು ಎಷ್ಟೇ ಹಣ ಮತ್ತು ಪಿಸ್ತೂಲ್ ಕೊಡುವುದಾಗಿ ವಿದೇಶಿ ವ್ಯಕ್ತಿ ಆಮಿಷ ಒಡ್ಡಿದ್ದ ಎನ್ನಲಾಗಿದೆ.
ಸಂಚಿನಲ್ಲಿ ಭಾಗಿಯಾದ ಇತರರ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.




