Home Crime ಕೊಲ್ಲೂರು: ಜಾತಿ ನಿಂದನೆ ವಿಚಾರಕ್ಕೆ ಎರಡು ಪ್ರತ್ಯೇಕ ಪ್ರಕರಣ – 3 ಮಂದಿಯ ಬಂಧನ…!!

ಕೊಲ್ಲೂರು: ಜಾತಿ ನಿಂದನೆ ವಿಚಾರಕ್ಕೆ ಎರಡು ಪ್ರತ್ಯೇಕ ಪ್ರಕರಣ – 3 ಮಂದಿಯ ಬಂಧನ…!!

ಕೊಲ್ಲೂರು: ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಲ ಗ್ರಾಮದಲ್ಲಿ ಜಾತಿ ನಿಂದನೆ ಮತ್ತು ಬಳಿಕ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು 3 ಜನರನ್ನು ಬಂಧಿಸಿದ್ದಾರೆ.

ಬೆಳ್ಳಾಲ ಗ್ರಾಮ, ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿ
51/2026 – ದಲಿತ ದೌರ್ಜನ್ಯ ಕಾಯ್ದೆ ಪ್ರಕರಣ
ಫಿರ್ಯಾದುದಾರರಾದ ನೊಂದ ಮಹಿಳೆಯೊಬ್ಬರು ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ದೂರಿನ ಪ್ರಕಾರ ಸನತ್ ಕುಂದಾಪುರ ಎಂಬುವವರು ಅವರ ಮನೆಯ ಹತ್ತಿರ ಬಂದು ಮಾನಕ್ಕೆ ಕುಂದುಂಟಾಗುವಂತೆ ವರ್ತಿಸಿದ್ದಾರೆ ಮತ್ತು ಜಾತಿ ನಿಂದನೆ ಮಾಡಿದ್ದಾರೆ.

ಈ ದೂರಿನ ಮೇರೆಗೆ ಕೊಲ್ಲೂರು ಪೊಲೀಸರು ದಲಿತ ದೌರ್ಜನ್ಯ ಕಾಯ್ದೆಯಡಿ ಅಪರಾಧ ಕ್ರಮಾಂಕ: 51/2026 ರಂತೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿತ ಸನತ್ ಕುಂದಾಪುರನನ್ನು ಪೊಲೀಸರು ಬಂಧಿಸಿದ್ದಾರೆ.

ಅಪರಾಧ ಕ್ರಮಾಂಕ: 52/2026 – ಕೊಲೆ ಯತ್ನ ಪ್ರಕರಣ
ಅದೇ ಸಮಯದಲ್ಲಿ ನೊಂದ ಮಹಿಳೆಯ ಕುಟುಂಬಸ್ಥರು ಸನತ್ ಕುಂದಾಪುರನನ್ನು ಕಟ್ಟಿ ಹಲ್ಲೆ ನಡೆಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಹಲ್ಲೆಗೆ ಒಳಗಾದ ಯುವಕ ನೀಡಿದ ದೂರಿನ ಮೇರೆಗೆ ಕೊಲ್ಲೂರು ಪೊಲೀಸರು ಅಪರಾಧ ಕ್ರಮಾಂಕ: 52/2026 ರಂತೆ ಕೊಲೆ ಯತ್ನ ಮತ್ತು ವಿವಿಧ ಕಲಂಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಎರಡೂ ಪ್ರಕರಣಗಳು ತನಿಖೆಯಲ್ಲಿವೆ. ಪ್ರಕರಣಕ್ಕೆ ಸಂಬಂಧಿಸಿದ ಇನ್ನುಳಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಕೊಲ್ಲೂರು ಪೊಲೀಸರು ತಿಳಿಸಿದ್ದಾರೆ.