Home Latest ಕಡೆಕಾರ್ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯ ಸತೀಶ್ ಕೋಟ್ಯಾನ್ ಹೃದಾಯಘಾತದಿಂದ ನಿಧನ….!!

ಕಡೆಕಾರ್ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯ ಸತೀಶ್ ಕೋಟ್ಯಾನ್ ಹೃದಾಯಘಾತದಿಂದ ನಿಧನ….!!

ಉಡುಪಿ: ಕಡೆಕಾರ್ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯ, ಸಮಾಜ ಸೇವಕ ಪಿತ್ರೋಡಿ ಸತೀಶ್ ಕೋಟ್ಯಾನ್(56) ಹೃದಾಯಘಾತದಿಂದ ಇಂದು ನಿಧನರಾದರು.

ಸ್ಥಳೀಯವಾಗಿ ಸಮಾಜಮುಖಿಯಾಗಿ ಗುರುತಿಸಿಕೊಂಡಿದ್ದ ಸತೀಶ್ ಅವರು ಸ್ನೇಹ ಜೀವಿಯಾಗಿದ್ದರು. ಮೊದಲು ಕಾಂಗ್ರೆಸ್ ಪಕ್ಷದಿಂದ ಗುರುತಿಸಿಕೊಂಡಿದ್ದ ಇವರು ಬಳಿಕ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರಬಂಧು ಬಳಗವನ್ನು ಅಗಲಿದ್ದಾರೆ.