Home Crime ಬೈಂದೂರು: ವೃದ್ಧರೋರ್ವರು ಬಾವಿಗೆ ಹಾರಿ ಆತ್ಮಹತ್ಯೆ…!!

ಬೈಂದೂರು: ವೃದ್ಧರೋರ್ವರು ಬಾವಿಗೆ ಹಾರಿ ಆತ್ಮಹತ್ಯೆ…!!

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಮಾಸ್ತಿ ಪೂಜಾರಿ (68) ಎಂಬವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರೂರು ದೊಂಬೆಯಲ್ಲಿ ನಡೆದಿದೆ.

ಮಾಸ್ತಿ ಪೂಜಾರಿ ಅವರು ಪತ್ನಿ ನಾಗಮ್ಮ ಅವರೊಂದಿಗೆ ಶಿರೂರು ದೊಂಬೆಯಲ್ಲಿ ವಾಸವಾಗಿದ್ದು, ಉಪ್ಪುಂದದಲ್ಲಿ ಜನರಲ್‌ ಸ್ಟೋರ್‌ ನಡೆಸುತ್ತಿದ್ದರು.

ಸುಮಾರು ಮೂರು ವರ್ಷಗಳ ಹಿಂದೆ ಅವರ ಮಗಳ ಏಕೈಕ ಪುತ್ರ ಸುನೀಲ್‌ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಮಾಸ್ತಿ ಪೂಜಾರಿ ಅವರು ಮಾನಸಿಕವಾಗಿ ಖಿನ್ನರಾಗಿದ್ದರು ಎನ್ನಲಾಗಿದೆ.

ಸೆಪ್ಟೆಂಬರ್‌ 11ರಂದು ಬೆಳಗ್ಗೆ ಸುಮಾರು 9.30ರ ವೇಳೆಗೆ ಶಿರೂರು ದೊಂಬೆಯಲ್ಲಿರುವ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ತಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.