ಹಳೆಯಂಗಡಿ: ಇಲ್ಲಿನ ಇಂದಿರ ನಗರ ರೈಲ್ವೆ ಗೇಟ್ನಲ್ಲಿ ರೈಲು ಚಲಿಸುತ್ತಿದ್ದಾಗಲೇ ಗೇಟ್ ದಾಟಲು ಪ್ರಯತ್ನ ಮಾಡಿದ ಓರ್ವ ರೈಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ
ಮೃತ ವ್ಯಕ್ತಿಯು ಒರಿಸ್ಸಾ ಮೂಲದ ಜಗ 40 ವರ್ಷ ಎಂದು ತಿಳಿದುಬಂದಿದೆ ಇವರು ಇಲ್ಲಿನ ತೋಕುರು ಸಮೀಪ ಫ್ಲೈವುಡ್ ಫ್ಯಾಕ್ಟರಿ ಒಂದರಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು ಎನ್ನಲಾಗಿದೆ
ಹಳೆಯಂಗಡಿ ಪೇಟೆಯಿಂದ ಇಂದಿರಾನಗರ ಕಡೆ ನಡೆದುಕೊಂಡು ಹೋಗುತ್ತಿರುವಾಗ ಕುಡಿದ ಮತ್ತಿನಲ್ಲಿ ರೈಲ್ವೆ ಗೇಟ್ ಬಲಿ ರೈಲು ಚಲಿಸುತ್ತಿದ್ದಾಗಲೇ ಹಳಿದಾಟಲು ಮುಂದಾಗಿದ್ದರು ಎನ್ನಲಾಗಿದೆ ಅಲ್ಲಿ ಸಾರ್ವಜನಿಕರು ಎಷ್ಟು ಬೊಬ್ಬೆ ಹಾಕಿದರು ಮತ್ತೆ ಮತ್ತೆ ರೈಲಿನ ಬಲಿಯೇ ಹೋಗುತ್ತಿದ್ದ ಇಬ್ಬರಲ್ಲಿ ಓರ್ವ ರೈಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ
ಈ ಘಟನೆಯಿಂದಾಗಿ ಕೆಲವು ಹೊತ್ತು ವಾಹನ ಸಂಚಾರಕ್ಕೆ ಅಡೆತಡೆಯಾಯಿತು ಮುಲ್ಕಿ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದರು.




