ಕೋಟ: ಬನ್ನಾಡಿ ಗ್ರಾಮದ ಉಪ್ಲಾಡಿ ತೆಂಕಬೆಟ್ಟು ಪ್ರದೇಶದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ವಾಹನವನ್ನು ಕೋಟ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜೂನ್ 1ರಂದು ಮಧ್ಯಾಹ್ನ ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ (ತನಿಖೆ) ಮಹಾಂತೇಶ್ ಜಾಬಗೌಡ ಅವರು ರೌಂಡ್ಸ್‌ನಲ್ಲಿದ್ದ ವೇಳೆ ಅಕ್ರಮ ಮರಳು ಸಾಗಾಟದ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದಾಳಿ ನಡೆಸಿದರು. ಈ ವೇಳೆ KA-20-C-8248 ಸಂಖ್ಯೆಯ ಟಿಪ್ಪರ್ ವಾಹನದಲ್ಲಿ ಮರಳು ಸಾಗಾಟ ಮಾಡುತ್ತಿರುವುದು ಕಂಡುಬಂದಿದ್ದು, ಚಾಲಕ ವಾಹನ ಹಾಗೂ ಮರಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಪರಿಶೀಲನೆ ವೇಳೆ ವಾಹನದ ಮಾಲೀಕ ಶಶೀಧರ ಪೂಜಾರಿ ಎಂದು ತಿಳಿದುಬಂದಿದೆ. ಯಾವುದೇ ಪರವಾನಗಿ ಇಲ್ಲದೆ, ಸರ್ಕಾರಕ್ಕೆ ರಾಜಧನ ಪಾವತಿಸದೆ ಅಕ್ರಮ ಲಾಭ ಪಡೆಯುವ ಉದ್ದೇಶದಿಂದ ಮರಳನ್ನು ಕಳವು ಮಾಡಿ ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಟಿಪ್ಪರ್‌ನಲ್ಲಿ ಸುಮಾರು 10 ಬುಟ್ಟಿಯಷ್ಟು ಮರಳು ಹಾಗೂ ಸ್ಥಳದಲ್ಲಿ ಸುಮಾರು ಮೂರು-ಕಾಲು ಯೂನಿಟ್ ಮರಳಿನ ರಾಶಿ ಪತ್ತೆಯಾಗಿದೆ. ಸುಮಾರು ₹6,000 ಮೌಲ್ಯದ ಮರಳು, ₹2 ಲಕ್ಷ ಮೌಲ್ಯದ ಟಿಪ್ಪರ್ ವಾಹನ ಹಾಗೂ ಚಾಲಕ ಬಿಟ್ಟುಹೋದ ಒಪ್ಪೋ ಕಂಪನಿಯ ಮೊಬೈಲ್ ಹ್ಯಾಂಡ್‌ಸೆಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




