ಕುಂದಾಪುರ : ಕೋಟ ಅಮೃತೇಶ್ವರಿ ದೇವಾಲಯದಲ್ಲಿ ದೇವಾಲಯದ ಗರ್ಭಗುಡಿಯ ಪಕ್ಕದಲ್ಲೇ ತೀರ್ಥ ಸ್ವೀಕರಿಸುತ್ತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಮೂವರು ಕಳ್ಳಿಯರ ತಂಡ ಕಳವು ಮಾಡಿ ಪರಾರಿಯಾಗಿದೆ.
ಭಕ್ತರ ನೂಕುನುಗ್ಗಲಿನ ನಡುವೆ ಕಳ್ಳಿಯರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.



