Home Latest ಉಚಿತ ಫ್ಯಾಬ್ರಿಕ್ ಪೈಂಟಿಂಗ್ ಹಾಗೂ ಬ್ಲೌಸ್ ಎಂಬ್ರಾಯಿಡರಿ ಶಿಬಿರ…!!

ಉಚಿತ ಫ್ಯಾಬ್ರಿಕ್ ಪೈಂಟಿಂಗ್ ಹಾಗೂ ಬ್ಲೌಸ್ ಎಂಬ್ರಾಯಿಡರಿ ಶಿಬಿರ…!!

ಉಡುಪಿ : ಎ ಪಿ ಜೆ ಅಬ್ದುಲ್ ಕಲಾಂ ಟೆಕ್ನಿಕಲ್ ಎಜುಕೇಶನ್ ನವದೆಹಲಿ ಇದರ ಅದೀನ ಸಂಸ್ಥೆ ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ಕಾರ್ಕಳ ಇದರ ಆಶ್ರಯದಲ್ಲಿ ಉಚಿತ ಫ್ಯಾಬ್ರಿಕ್ ಪೈಂಟಿಂಗ್ ಹಾಗೂ ಬ್ಲೌಸ್ ಎಂಬ್ರಾಯಿಡರಿ ಶಿಬಿರ ಉಡುಪಿ ನಿವೇದಿತಾ ರಸ್ತೆಯ ಸೌತ್ ಸ್ಕೂಲ್ ಸಮೀಪದ ದುರ್ಗಾ ಕೃಪಾದಲ್ಲಿ ನಡೆಯಲಿದೆ.

ಸೆಪ್ಟೆಂಬರ್ 16ರಿಂದ 19ರವರೆಗೆ ಪೂರ್ವಾಹ್ನ 10ರಿಂದ ಸಾಯಂಕಾಲ 4 ರವರಗೆ ನುರಿತ ಬೋಧಕರಿಂದ ಡಿಸೈನರ್ ಬ್ಲೌಸ್, ಬ್ಲೌಸ್ ಎಂಬ್ರಾಯ್ದರಿ, ಫ್ಯಾಬ್ರಿಕ್ ಪೈಂಟಿಂಗ್ ಬಗ್ಗೆ ಮಾಹಿತಿ ಹಾಗೂ ತರಬೇತಿ ನೀಡಲಾಗುವುದು.

ಸ್ವಾಭಿಮಾನಿ ಬದುಕಿಗಾಗಿಯುವತಿಯರು ಹಾಗೂ ಮಹಿಳೆಯರು ಈ ಶಿಬಿರದ ಪ್ರಯೋಜನ ಪಡಕೊಳ್ಳುವಂತೆ ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ಸಂಸ್ಥಾಪಕಿ ಸಾಧನ ಅಶ್ರೀತ್ ರವರು ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ತಮ್ಮ ಹೆಸರು 7353211991, 7022044193 ಮೊಬೈಲ್ ನಂಬರ್ ಗೆ ಕರೆ ಮಾಡುವ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ.