Home Latest ಉಡುಪಿ: ನ್ಯಾಯವಾದಿ ಕೊಡಂಕೂರು ಜಯರಾಮ ಶೆಟ್ಟಿ ನಿಧನ…!!

ಉಡುಪಿ: ನ್ಯಾಯವಾದಿ ಕೊಡಂಕೂರು ಜಯರಾಮ ಶೆಟ್ಟಿ ನಿಧನ…!!

ಉಡುಪಿ: ಇಂದ್ರಾಳಿ ನಿವಾಸಿ, ಕೊಡಂಕೂರು ಜಯರಾಮ ಶೆಟ್ಟಿ (73) ಅವರು ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಸಂಜೆ ನಿಧನರಾದರು.

ಅವರು ವಿಜಯಾ ಬ್ಯಾಂಕಿನಿಂದ 2000ರಲ್ಲಿ ಸ್ವಯಂ ನಿವೃತ್ತಿ (Voluntary Retirement) ಪಡೆದುಕೊಂಡ ಬಳಿಕ, ಉಡುಪಿಯಲ್ಲಿ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಸಹಕಾರಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದ ಅವರು, ಉಡುಪಿಯ ನಿತ್ಯಾನಂದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರ ಗುಡಿಯ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾಗಿ ಹಾಗೂ ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರು, ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಅವರ ನಿಧನದಿಂದ ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ಅವರು ಸೇವೆ ಸಲ್ಲಿಸಿದ ವಿವಿಧ ಸಂಸ್ಥೆಗಳಲ್ಲಿ ದುಃಖದ ಛಾಯೆ ಆವರಿಸಿದೆ.