ಬಂಟ್ವಾಳ: ಮಂಗಳೂರು-ಸುಬ್ರಹ್ಮಣ್ಯ ರೈಲಿನ ಕೊನೆಯ ಬೋಗಿಯಲ್ಲಿ ಪ್ರಯಾಣಿಕನೊಬ್ಬನ ಮೇಲೆ ಹಲ್ಲೆ ನಡೆದಿರುವ ಆರೋಪಕ್ಕೆ ಕುರಿತಂತೆ ಮೂವರನ್ನು ರೈಲ್ವೆ ರಕ್ಷಣಾ ಪಡೆ ಮಂಗಳವಾರ ಬೆಳಗ್ಗೆ ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದಿದೆ.
ಕೋಡಿಂಬಾಳ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಿದ್ದ ಮೂವರು ವ್ಯಕ್ತಿಗಳು ಬೋಗಿಯೊಳಗೆ ತೀವ್ರ ಗದ್ದಲ ಎಬ್ಬಿಸುತ್ತಿದ್ದರು ಎನ್ನುವ ದೂರನ್ನು ರೈಲ್ವೆ ಪೊಲೀಸರಿಗೆ ನೀಡಲಾಗಿತ್ತು.
ರೈಲು ಬಂಟ್ವಾಳ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಜಾಗೃತರಾದ ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ರೈಲನ್ನು ಬಂಟ್ವಾಳ ನಿಲ್ದಾಣದಲ್ಲಿ ಕೆಲವು ನಿಮಿಷಗಳ ಕಾಲ ಸ್ಥಗಿತ ಮಾಡಲಾಗಿತ್ತು.




