ಮಣಿಪಾಲ: ಪರವಾನಿಗೆ ಇಲ್ಲದೆ ಸರಕಾರಿ ಜಮೀನಿನಲ್ಲಿ ಬಂಡೆ ಕಲ್ಲಿಗೆ ಸ್ಪೋಟ ನಡೆಸಿದ ಪ್ರಕರಣದಲ್ಲಿ ಮಣಿಪಾಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ದಿನಾಂಕ 05.09.2026 ರಂದು ಬೆಳಿಗ್ಗೆ 11:00 ಗಂಟೆಗೆ ಮಣಿಪಾಲ ಪೊಲೀಸ್ ಠಾಣಾ ಸರಹದ್ದಿನ ಉಡುಪಿ ತಾಲೂಕು ಮರ್ಣೆ ಗ್ರಾಮದ ಕುಕ್ಕಿಪಲ್ಕೆ ಸರ್ವೆ ನಂ 112/2, ವಿಸ್ತೀರ್ಣ 1.54 ಎಕರೆ ಸರಕಾರಿ ಸ್ಥಿರಾಸ್ತಿ ಜಮೀನಿನಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೆ ಬಂಡೆ ಕಲ್ಲನ್ನು ಸ್ಪೋಟಕ ವಸ್ತು ಬಳಸಿ ಅಕ್ರಮವಾಗಿ ಸ್ಪೋಟಿಸಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 150/2026, ಕಲಂ 288 ಜೊತೆಗೆ 3(5) BNS ಹಾಗೂ 9(b) ಸ್ಪೋಟಕ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
ಮಣಿಪಾಲ ಠಾಣಾ PSI ತಿಮ್ಮೇಶ್ ಬಿ.ಎನ್ ರವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಬಂಧಿತ ಆರೋಪಿಗಳು ಕೆ. ಗೋವಿಂದ ರಾಜ್ (40) ತಂದೆ ದಿ. ಎ ಕೃಷ್ಣ, ವಾಸ: ರಘು ನಿವಾಸ, ತೋಡಿಕರ್ಮಾರ್, ಇನ್ನಾ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಹಾಗೂ ಶೇಖಪ್ಪ ಚಲವಾದಿ @ ಚಂದ್ರು (28) ತಂದೆ ಕರೆಪ್ಪ ಚಲವಾದಿ, ವಾಸ: ಗುಣಕರ್ಚಿ, ಮುದ್ದೇಬಿಹಾಳ ತಾಲೂಕು, ವಿಜಯಪುರ ಜಿಲ್ಲೆ. ಪ್ರಸ್ತುತ ವಾಸ: ಹಾಳೆಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ, ಕಲ್ಯಾ, ಕಾರ್ಕಳ ತಾಲೂಕು ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ದಸ್ತಗಿರಿ ಮಾಡಿ, ಕೃತ್ಯಕ್ಕೆ ಬಳಸಿದ KA28-TA-6421 ನಂಬರ್‌ನ Drilling Compressor Machine attached Mahindra Tractor ಹಾಗೂ KA19-ME-7707 ನಂಬರ್‌ನ ಗ್ರೇ ಬಣ್ಣದ ನಿಶಾನ್ ಟೆರಾನೊ ಕಾರು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.





