ಪುತ್ತೂರು; ಇಲ್ಲಿನ ಅಜೇಯನಗರದ ಮಹಿಳೆಯೊಬ್ಬರ ಮೃತದೇಹವೊಂದು ಶಂಭೂರು ಡ್ಯಾಮ್ ಬಳಿ ಜು.24 ರಂದು ತಡರಾತ್ರಿ ಪತ್ತೆಯಾಗಿರುವ ಕುರಿತು ವರದಿಯಾಗಿದೆ.
ಪಡ್ನೂರು ಗ್ರಾಮದ ಅಜೇಯನಗರ ನಿವಾಸಿ ರಾಮ್‌ಭಟ್ ಅವರ ಪತ್ನಿ ವಿಜಯ (60 ವ) ಅವರು ಮೃತಪಟ್ಟವರು.
ಜು.23 ರಂದು ಪೇಟೆಗೆ ಹೋಗುವುದಾಗಿ ಮನೆಯಿಂದ ಹೊರಟಿದ್ದ ಅವರು ನಾಪತ್ತೆಯಾಗಿದ್ದು, ಜು.24 ರಂದು ರಾಮ್ ಭಟ್ ಅವರು ನೀಡಿದ ದೂರಿನನ್ವಯ ಪುತ್ತೂರು ಮಹಿಳೆಆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದೇ ದಿನ ರಾತ್ರಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು.
ಮೃತರು ಪತಿ ರಾಮ ಭಟ್ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.




