ಸೌದಿ ಅರೇಬಿಯಾ: ಸಾಮಾಜಿಕ ಜಾಲತಾಣ ಎಕ್ಸ್ (ಹಳೆಯ ಟ್ವಿಟ್ಟರ್) ನಲ್ಲಿ ‘NRIMinistry’ಕ್ಕೆ ಸಂಬಂಧಿಸಿದ ಅಭಿಯಾನವು ಭಾರತದಲ್ಲಿ, ಗಲ್ಫ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ಆಗಿ ಎಲ್ಲರ ಗಮನ ಸೆಳೆದಿದೆ. ವಿದೇಶದಲ್ಲಿ ವಾಸಿಸುವ ಕರ್ನಾಟಕ ಭಾರತೀಯರ ಸಮಸ್ಯೆಗಳನ್ನು ಒಂದೇ ವೇದಿಕೆಯಡಿ ಪರಿಹರಿಸಲು ಪ್ರತ್ಯೇಕ ಸಚಿವಾಲಯ ಅಥವಾ ವಿಶೇಷ ವಿಭಾಗವನ್ನು ರಚಿಸಬೇಕು ಎಂಬ ಬೇಡಿಕೆ ಹಲವು ವಲಯಗಳಿಂದ ಕೇಳಿಬರುತ್ತಿದೆ. ಅಭಿಯಾನದ ಸಭೆ ದಮ್ಮಾಮ್ ನ ರಾಯಲ್ ಮಲಬಾರ್ ಹೋಟೆಲ್ ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತಾಡಿದ ಉಪಾಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್.. ಬೆಂಗಳೂರುರಲ್ಲಿ ನಡೆದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಯವರ ಜೊತೆ ನಡೆದ ಮಾತುಕತೆ ಹಾಗು ಆಶ್ವಾಸನೆ ಬಗ್ಗೆ ವಿವರಿಸಿದರು , ಹಾಗು ಈ ಸಂದರ್ಭ ದಲ್ಲಿ ಇದ್ದ ಅನಿವಾಸಿ ಕರ್ನಾಟಕ ಭಾರತೀಯರು ಕರ್ನಾಟಕ ಸರಕಾರದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನಿವಾಸಿ ಕನ್ನಡಿಗರ ಸಚಿವಾಲಯ ಸ್ಥಾಪಿಸುವ ಕುರಿತು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ, ಆ ಸಚಿವಾಲಯವನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಬೇಕು ಎಂದು ಒತ್ತಾಯಿಸಿ ಈ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ನಾವು ಸೌದಿ ಅರೇಬಿಯಾ ಅನಿವಾಸಿ ಕರ್ನಾಟಕ ಭಾರತೀಯರಿಗೆ ಕಾನೂನು ನೆರವು, ಹೂಡಿಕೆ ಮಾರ್ಗದರ್ಶನ, ದಾಖಲೆ ಸಂಬಂಧಿತ ಸಮಸ್ಯೆಗಳು ಹಾಗೂ ಕಲ್ಯಾಣ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸಲು ಪ್ರತ್ಯೇಕ ವ್ಯವಸ್ಥೆ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು . ನಿರೀಕ್ಷೆಗೂ ಮೀರಿ ಸಾವಿರಾರು ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ಸೂಚಿಸಿ ಅಭಿಯಾನವನ್ನು ಯಶಸ್ವಿಗೊಳಿಸಿದರು.
ಈ ಅಭಿಯಾನ ಭಾರತದಲ್ಲಿ ನಂಬರ್ ಒನ್ ಟ್ರೆಂಡಿಂಗ್ ಆಗಿರುವುದು ನಮ್ಮ ಒಗ್ಗಟ್ಟು ಹಾಗೂ ನಮ್ಮ ಬೇಡಿಕೆಯ ಬಲವನ್ನು ತೋರಿಸಿದೆ. ಡಿ.ಕೆ. ಶಿವಕುಮಾರ್ ಅವರು ಶೀಘ್ರದಲ್ಲೇ ಅನಿವಾಸಿ ಕನ್ನಡಿಗರ ಸಚಿವಾಲಯವನ್ನು ಕಾರ್ಯರೂಪಕ್ಕೆ ತರುತ್ತಾರೆ ಎಂಬ ವಿಶ್ವಾಸ ನಮ್ಮದಲ್ಲಿದೆ,” ಎಂದು ವಿದೇಶಿ ಭಾರತೀಯ ಸಮುದಾಯದ ಸಮಸ್ಯೆಗಳು ಮತ್ತು ಅವರ ಪ್ರತಿನಿಧಿತ್ವದ ಕುರಿತು ಅವರು ಆಶಾಭಾವ ವ್ಯಕ್ತಪಡಿಸಿದರು.




ಉಮರ್ ಫಾರೂಕ್ ಮೂಲ್ಕಿ, ಅಯಾಝ್ ಕೈಕಂಬ, ಅನ್ವರ್, ಗೋಪಾಲ ಶೆಟ್ಟಿ, ಶೆರೀಫ್ ಕಾರ್ಕಳ, ಕಬೀರ್ ಲಕ್ಕಿ ಸ್ಟಾರ್, ಪುಷ್ಪರಾಜ್ ಹಾಗೂ ಹಲವಾರು ಮಂದಿ ಭಾಗವಹಿಸಿದರು.




