Home Latest ಉಡುಪಿ : ಪರ್ಯಾಯ ಸಂದರ್ಭದಲ್ಲಿ ಸಹಕರಿಸಿದ ಕೆನರಾ ಬ್ಯಾಂಕ್ ನ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ...

ಉಡುಪಿ : ಪರ್ಯಾಯ ಸಂದರ್ಭದಲ್ಲಿ ಸಹಕರಿಸಿದ ಕೆನರಾ ಬ್ಯಾಂಕ್ ನ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಮಠದ ವತಿಯಿಂದ ಗೌರವ..!!

ಉಡುಪಿ:ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಶೀರೂರು ಮಠ ಉಡುಪಿ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಪರ್ಯಾಯ ಕಾಲದಲ್ಲಿ ಸಹಕರಿಸಿದ ಕೆನರಾ ಬ್ಯಾಂಕ್ನ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರನ್ನು ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.

ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ನ ಜನರಲ್ ಮ್ಯಾನೇಜರ್ :ಹೆಚ್ ಕೆ ಗಂಗಾಧರ್ ಡೆಪ್ಯುಟಿ ಜನರಲ್ ಮ್ಯಾನೇಜರ್ : ಪಬಿತ್ರ ಕುಮಾರ್ ದಾಸ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ : ಸಂಜೀವ ಕುಮಾರ್ ಸಂಜಯ್ ಖಾತ್ರಿ ಸಂದೀಪ್ ಕುಮಾರ್ ಅಗರವಾಲ್ ಡೆಪ್ಯೂಟಿ ಜನರಲ್ ಮ್ಯಾನೇಜರ್ , ಉಡುಪಿ RO 1 ಮಹಾಮಾಯಾ ಪ್ರಸಾದ್ ರಾಯ್ ಹಾಗೂ ಶೀರೂರು ಮಠದ ದಿವಾನರಾದ ಡಾ.ಉದಯ ಕುಮಾರ್ ಸರಳತ್ತಾಯ ಹಾಗೂ ಶೀರೂರು ಪರ್ಯಾಯ ಸ್ವಾಗತ ಸಮಿತಿಯ ಮೋಹನ್ ಭಟ್ ಮಧುಕರ್ ಮುದ್ರಾಡಿ ಉಪಸ್ಥಿತರಿದ್ದರು.