ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಯುವತಿಯೊಬ್ಬಳು ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವತಿ ರಶ್ಮಿತಾ ಎಂದು ತಿಳಿಯಲಾಗಿದೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಸಾರಂಶ : ಪಿರ್ಯಾದಿದಾರರಾದ ರಾಮ (53), ಚೇರ್ಕಾಡಿ ಗ್ರಾಮ, ಬ್ರಹ್ಮಾವರ ಇವರ ಮಗಳು ರಶ್ಮಿತಾ (20) B.Sc ನರ್ಸಿಂಗ್ ವಿಧ್ಯಾಭ್ಯಾಸ ಕಲಿಯುತ್ತಿದ್ದವಳು ಪರೀಕ್ಷೆಯಲ್ಲಿ Fail ಆಗಿ ಸುಮಾರು 6 ತಿಂಗಳಿಂದ ಕಾಲೇಜಿಗೆ ಹೋಗದೇ ಮನೆಯಲ್ಲಿಯೇ ಇದ್ದು, ಕಳೆದ ಎರಡೂವರೆ ತಿಂಗಳಿಂದ ಮಾನಸಿಕ ಆಸ್ಪತ್ರೆಯಲ್ಲಿ ಅವಳ ಮಾನಸಿಕ ಖಾಯಿಲೆಗೆ ಚಿಕಿತ್ಸೆ ನಡೆಯುತ್ತಿದ್ದು, ಇದೇ ಕಾರಣದಿಂದ ರಶ್ಮಿತಾಳು ಮಾನಸಿಕವಾಗಿ ನೊಂದು ಜೀವನದಲ್ಲಿ ಜೀಗುಪ್ಸೆಗೊಂಡು ದಿನಾಂಕ 17/07/2025 ರಂದು ಮಧ್ಯಾಹ್ನ 2:00 ಗಂಟೆಯಿಂದ ಮಧ್ಯಾಹ್ನ 2:45 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಕೋಣೆಯ ಫ್ಯಾನಿಗೆ ಶಾಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 50/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.