Home Crime ಮಣಿಪಾಲ : ದನ ಕಳ್ಳತನ : ಕಾರಿನಲ್ಲಿ ತುಂಬಿಸಿಕೊಂಡು ಪರಾರಿಯಾದ ದುಷ್ಕರ್ಮಿ ಗಳು…!!

ಮಣಿಪಾಲ : ದನ ಕಳ್ಳತನ : ಕಾರಿನಲ್ಲಿ ತುಂಬಿಸಿಕೊಂಡು ಪರಾರಿಯಾದ ದುಷ್ಕರ್ಮಿ ಗಳು…!!

ಮಣಿಪಾಲ : ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದನ ಕಳ್ಳತನದ ಪ್ರಕರಣ ದಾಖಲಾಗಿದೆ.

ಪರ್ಕಳ ನಿವಾಸಿ ಧೀಕ್ಷಿತ್ ಶೆಟ್ಟಿ (26) ನೀಡಿದ ದೂರಿನ ಪ್ರಕಾರ, ಜುಲೈ 22ರ ಮುಂಜಾನೆ ಸುಮಾರು 1:30ರ ವೇಳೆಗೆ ಶಾಂತಿನಗರ ರಸ್ತೆಯಲ್ಲಿ ದನೊಂದು ಮಲಗಿಕೊಂಡಿತ್ತು. ಇದೇ ವೇಳೆ ನೀಲಿ ಬಣ್ಣದ ಮಾರುತಿ ಬಲೆನೊ ಕಾರಿನಲ್ಲಿ ಬಂದ ಮೂವರು ಆರೋಪಿಗಳು ರಸ್ತೆಯಲ್ಲಿ ಮಲಗಿದ್ದ ದನವನ್ನು ಕಾರಿನಲ್ಲಿ ತುಂಬಿಸಿಕೊಂಡು ಅಲೆವೂರು ಮಾರ್ಗವಾಗಿ ಗಣಪತಿ ದೇವಸ್ಥಾನದ ಕಡೆಗೆ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.