Home Crime ಖಾಸಗಿ ಬಸ್, ಕ್ಯಾಂಟರ್ ನಡುವೆ ಢಿಕ್ಕಿ : ಇಬ್ಬರು ಚಾಲಕರು ಸಾವು…!!

ಖಾಸಗಿ ಬಸ್, ಕ್ಯಾಂಟರ್ ನಡುವೆ ಢಿಕ್ಕಿ : ಇಬ್ಬರು ಚಾಲಕರು ಸಾವು…!!

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ದೊಡ್ಡಹುಲ್ಲೂರು ಗ್ರಾಮದ ಬಳಿ ಅಪಘಾತ ಸಂಭವಿಸಿದೆ.

ಕ್ಯಾಂಟರ್ ಚಾಲಕ ಶ್ರೀನಾಥ್(42), ಬಸ್ ಚಾಲಕ ಬಾಲಕೃಷ್ಣ(40) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಚೆನ್ನೈ ಎಕ್ಸ್ ಪ್ರೆಸ್ ಹೈವೇಯ ಸರ್ವಿಸ್ ರಸ್ತೆಯಲ್ಲಿ ಅಪಘಾತ ನಡೆದಿದೆ.

ಫಾಕ್ಸ್ ಕಾನ್ ಕಂಪನಿಗೆ ಸೇರಿದ ಖಾಸಗಿ ಬಸ್ ಬಸ್ ಬ್ರೇಕ್ ಫೇಲ್ ಹಿನ್ನೆಲೆ ಸರ್ವಿಸ್ ರಸ್ತೆಯಲ್ಲಿ ಚಾಲಕ ನಿಲ್ಲಿಸಿದ್ದರು. ವಾಹನಗಳನ್ನು ಅವಾಯ್ಡ್ ಮಾಡುವಾಗ ಹಿಂದಿನಿಂದ ಬಂದು ಕ್ಯಾಂಟರ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಗಾಯಾಳುಗಳನ್ನು ಹೊಸಕೋಟೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.