Home Crime ಪಡುಬಿದ್ರಿ : ಯುವಕನೋರ್ವ ಬಾಟಲಿಯಲ್ಲಿ ತುಂಬಿಸಿ ಇಟ್ಟಿದ್ದ ಆಸಿಡ್ ನ್ನು ನೀರು ಎಂದು ಬಾವಿಸಿ ಕುಡಿದು...

ಪಡುಬಿದ್ರಿ : ಯುವಕನೋರ್ವ ಬಾಟಲಿಯಲ್ಲಿ ತುಂಬಿಸಿ ಇಟ್ಟಿದ್ದ ಆಸಿಡ್ ನ್ನು ನೀರು ಎಂದು ಬಾವಿಸಿ ಕುಡಿದು ಸಾವು…!!

ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪ ಯುವಕನೋರ್ವ ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಿ ಇಟ್ಟಿದ್ದ ಟೈಲ್ಸ್ ಕ್ಲೀನಿಂಗ್ ಮಾಡುವ ಆಸಿಡ್ ನ್ನು ನೀರು ಎಂದು ಭಾವಿಸಿ ಕುಡಿದು ಅಸ್ವಸ್ಥನಾಗಿ ಮೃತಪಟ್ಟ ಘಟನೆ ನಡೆದಿದೆ.

ಸಾವನ್ನಪ್ಪಿದ ಯುವಕ ಕಿರಣ್ ಎಂದು ತಿಳಿದು ಬಂದಿದೆ.

ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕಣದ ವಿವರ : ಪಿರ್ಯಾದಿದಾರರಾದ ದುರ್ಗಮ್ಮ (40), ವಿಜಯನಗರ ಜಿಲ್ಲೆ ಇವರ ಮಗ ಕಿರಣ್ (17) ತನ್ನ ಮಾವನು ಕೆಲಸ ಮಾಡುವ ಸ್ಥಳವಾದ ಕಾಪು ತಾಲೂಕು ಪಾದೆಬೆಟ್ಟು ಗ್ರಾಮದ ಪಾದೆಬೆಟ್ಟು ಎಂಬಲ್ಲಿಗೆ ಹೋಗಿ ಕೆಲಸ ಮಾಡುವ ಸ್ಥಳದಲ್ಲಿ ದಿನಾಂಕ 09/12/2025 ರಂದು ಮಧ್ಯಾಹ್ನ 3:30 ಗಂಟೆಗೆ ಇರುವಾಗ ಕೆಲಸದವರು ಟೈಲ್ಸ್ ಕ್ಲೀನಿಂಗ್ ಕೆಲಸದ ಬಗ್ಗೆ ಕೆಲಸದ ಬಳಿ ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಿ ಇಟ್ಟಿದ್ದ ಟೈಲ್ಸ್ ಕ್ಲೀನಿಂಗ್ ಮಾಡುವ ಆಸಿಡ್ ನ್ನು ನೀರು ಎಂದು ಭಾವಿಸಿ ಕುಡಿದು ಅಸ್ವಸ್ಥರಾದವರನ್ನು ಅದೇ ದಿನ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 10/12/2025 ರಂದು ರಾತ್ರಿ 9:30 ಗಂಟೆಗೆ ಮೃತ ಪಟ್ಟಿರುವುದಾಗಿದೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 27/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.