Home Art & Culture ಡಿ.12 ರಂದು ಕರಾವಳಿಯಾದ್ಯಂತ ಪಿಲಿಪಂಜ ತುಳು ಸಿನಿಮಾ ಬಿಡುಗಡೆ…!!

ಡಿ.12 ರಂದು ಕರಾವಳಿಯಾದ್ಯಂತ ಪಿಲಿಪಂಜ ತುಳು ಸಿನಿಮಾ ಬಿಡುಗಡೆ…!!

ಮಂಗಳೂರು : ಯಸ್ ಬಿ ಗ್ರೂಪ್ಸ್ ಅರ್ಪಿಸುವ ಶಿಯಾನ ಪ್ರೊಡಕ್ಷನ್ ಹೌಸ್ ಬ್ಯಾನರ್ನಡಿ ತಯಾರಾದ, ಪ್ರತೀಕ್ ಯು ಪೂಜಾರಿ ಕಾವೂರು ನಿರ್ಮಾಣದ, ಭರತ್ ಶೆಟ್ಟಿಯವರ ಕಥೆ, ಪರಿಕಲ್ಪನೆ ನಿರ್ದೇಶನದ, ವಿಭಿನ್ನ ತಂತ್ರಜ್ಞಾನದ ಬಹುತಾರಾಗಣದ “ಪಿಲಿಪಂಜ” ತುಳು ಸಿನಿಮಾ ಡಿಸೆಂಬರ್ 12 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕರು ತಿಳಿಸಿದ್ದಾರೆ.

ಈ ಚಿತ್ರದ ಚಿತ್ರಿಕರಣ ಕರಾವಳಿಯ ಹಲವು ಭಾಗಗಳಲ್ಲಿ ನಡೆದಿದ್ದು ನೂತನ ತಾಂತ್ರಿಕತೆಯನ್ನು ಬಳಸಿ ಚಿತ್ರಿಕರಣ ನಡೆಸಲಾಗಿದೆ. ಪಿಲಿಪಂಜ ಸಿನಿಮಾ ಮಂಗಳೂರಿನಲ್ಲಿ ಪಿವಿಆರ್, ಸಿನಿಪೊಲಿಸ್, ಭಾರತ್ ಸಿನಿಮಾಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಷ್ಮಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನಾ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಬೆಳ್ತಂಗಡಿಯಲ್ಲಿ ಭಾರತ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಮುಡಿಪುವಿನಲ್ಲಿ ಭಾರತ್ ಸಿನಿಮಾಸ್ ನಲ್ಲಿ ಸಿನಿಮಾ ತೆರೆಕಾಣಲಿದೆ ಎಂದರು.

ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ಶಿವಪ್ರಕಾಶ್ ಪೂಂಜ, ರವಿ ರಾಮಕುಂಜ, ರೂಪಶ್ರೀ ವರ್ಕಾಡಿ, ರಂಜನ್ ಬೋಳೂರು, ರಾಜ್ ಪ್ರಕಾಶ್ ಶೆಟ್ಟಿ, ಪ್ರತೀಕ್ ಯು ಪೂಜಾರಿ, ಪ್ರವೀಣ್ ಕೊಡಕ್ಕಲ್, ಜಯಶೀಲ, ಭಾಸ್ಕ‌ರ್ ಮಣಿಪಾಲ ಮುಂತಾದವರು ಅಭಿನಯಿಸಿದ್ದಾರೆ.

ತಾಂತ್ರಿಕ ವರ್ಗದದಲ್ಲಿ ನಿರ್ದೇಶನ ಭರತ್ ಶೆಟ್ಟಿ ನಿರ್ಮಾಪಕ ಪ್ರತೀಕ್ ಯು ಪೂಜಾರಿ ಕಾವೂರು,ಸಹನಿರ್ಮಾಪಕಿ ಬಿಂದಿಯ ಪ್ರತೀಕ್ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ರಮೇಶ್ ರೈ ಕುಕ್ಕುವಳ್ಳಿ,ಛಾಯಾಗ್ರಹಣ ಉದಯ್ ಬಳ್ಳಾಲ್, ಸಂಕಲನ ಶ್ರೀನಾಥ್ ಪವಾರ್, ಸಂಗೀತ ಎಲ್ ವಿ ಯಸ್, ಡಿ ಐ ಪ್ರಜ್ವಲ್ ಸುವರ್ಣ, ಸಿಜಿವರ್ಕ್ ಕಿರಣ್ ಬೆಂಗಳೂರು, ಸಹನಿರ್ದೇಶನ ಅಕ್ಷತ್ ವಿಟ್ಲ ಚಿತ್ರ ಕಥೆ ಸಂಭಾಷಣೆ ಸುರೇಶ್ ಬಲ್ಮರ, ಸಹಾಯಕ ನಿರ್ದೇಶನ ಸಜೇಶ್ ಪೂಜಾರಿ, ಪ್ರೊಡಕ್ಷಣ್ ಮೆನೆಜರ್ ಕಾರ್ತಿಕ್ ಜೆ ಶೆಟ್ಟಿ

ಸಾಹಿತ್ಯ ಕೆ ಕೆ ಪೇಜಾವರ, ರಜಿತ್ ಕದ್ರಿ, ರಕ್ಷಣ್ ಮಾಡೂರು,ಹಿನ್ನಲೆ ಗಾಯನ ನಿಹಾಲ್ ತಾವೋ, ಕೃತಿಕಾ ಅಖಿಲ್, ಸಂದೇಶ್ ನೀರ್ ಮಾರ್ಗ, ರಕ್ಷಣ್ ಮಾಡೂರು ರವರು ಚಿತ್ರಕ್ಕೆ ಕಾರ್ಯನಿರ್ವಹಿಸಿದ್ದಾರೆ.