ಉಡುಪಿ : ಕಾರ್ಕಳದ ಶ್ರೀ ವೆಂಕಟರಮಣ ದೇವಾಲಯದಲ್ಲಿ ಲಕ್ಷದೀಪೋತ್ಸವದ ಸಂಭ್ರಮ ಆರಂಭವಾಗಲಿದೆ.
ನವೆಂಬರ್ 9 ರಿಂದ 11 ರವರೆಗೆ ದೇವಾಲಯದ ಆವರಣದಲ್ಲಿ ವೈಭವಶಾಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಹಿನ್ನೆಲೆ ವಾಹನ ಸಂಚಾರಕ್ಕೆ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಜಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಪ್ರಕಟಣೆ ನೀಡಿದ್ದಾರೆ.
ನವೆಂಬರ್ 9 ರಂದು ಗರುಡ ವಾಹನ ಉತ್ಸವ ಹಾಗೂ ಕೆರೆದೀಪ ನಡೆಯಲಿದ್ದು, ಸಂಜೆ 6 ರಿಂದ ರಾತ್ರಿ 11 ರವರೆಗೆ ಬೃಹತ್ ವಾಹನಗಳು ಬಂಗ್ಲೆಗುಡ್ಡೆಯಿಂದ ಪುಲ್ಕೇರಿ ಮಾರ್ಗವಾಗಿ ಸಂಚರಿಸಬೇಕು.
ನವೆಂಬರ್ 10 ರಂದು ಲಕ್ಷದೀಪೋತ್ಸವ ಹಾಗೂ ವನಭೋಜನ ಉತ್ಸವದ ಹಿನ್ನೆಲೆಯಲ್ಲಿ ಬೆಳಗ್ಗೆ 10ರಿಂದ ಮರುದಿನ ಬೆಳಗ್ಗೆ 6ರವರೆಗೆ,
ಹಾಗೂ ನವೆಂಬರ್ 11 ರಂದು ಓಕುಳಿ ಹಾಗೂ ಪಲ್ಲಕ್ಕಿ ಉತ್ಸವದ ಸಮಯದಲ್ಲಿ ಸಂಜೆ 4ರಿಂದ ಮರುದಿನ ಬೆಳಗ್ಗೆ 4ರವರೆಗೆ ಘನವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ.
ಬಸ್‌ಗಳು ಹಾಗೂ ಲಘು ವಾಹನಗಳಿಗೆ ಪರ್ಯಾಯ ಮಾರ್ಗ ನಿಗದಿಪಡಿಸಲಾಗಿದೆ — ತಹಶೀಲ್ದಾರ್ ಜಂಕ್ಷನ್, ಕಲ್ಲೊಟ್ಟೆ ಹಾಗೂ ಮಾರ್ಕೆಟ್ ಮಾರ್ಗಗಳ ಮೂಲಕ ಸಂಚರಿಸಬೇಕು.
ಸಾರ್ವಜನಿಕರು ಸಂಚಾರ ನಿಯಮ ಪಾಲಿಸಿ ಉತ್ಸವದ ಸಂಭ್ರಮವನ್ನು ಸುರಕ್ಷಿತವಾಗಿ ಅನುಭವಿಸಲು ಜಿಲ್ಲಾ ಆಡಳಿತದಿಂದ ವಿನಂತಿಸಲಾಗಿದೆ.



