Home Crime ಮಣಿಪಾಲ : ಅಕ್ರಮ ಮರಳು ಸಾಗಾಟ : ಮರಳು ಸಹಿತ ಲಾರಿ ವಶಕ್ಕೆ…!!

ಮಣಿಪಾಲ : ಅಕ್ರಮ ಮರಳು ಸಾಗಾಟ : ಮರಳು ಸಹಿತ ಲಾರಿ ವಶಕ್ಕೆ…!!

ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿರುವಾಗ ಪೊಲೀಸರು ಮರಳು ಸಹಿತ ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಮಣಿಪಾಲ ಪೊಲೀಸರು ಅಕ್ರಮ ಮರಳು ಸಾಗಾಟ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ವಿವರ : ದಿನಾಂಕ 06/12/2025 ರಂದು 17:30 ಗಂಟೆಗೆ ಠಾಣಾ ಸಿಬ್ಬಂದಿ ನಾಗರಾಜ ನಾಯ್ಕರವರೊಂದಿಗೆ ಉಡುಪಿ ತಾಲೂಕು ಅಲೆವೂರು ಗ್ರಾಮದ ಅಲೆವೂರು ಗುಡ್ಡೆಅಂಗಡಿ ಚೆಕ್‌ ಪೋಸ್ಟ್‌ ಬಳಿ ಹೋಗಿ ಚೆಕ್‌ ಪೋಸ್ಟ್‌ ಕರ್ತವ್ಯದ ಠಾಣಾ ಜ್ಯೋತಿ ನಾಯಕ್‌ ಹಾಗೂ ಅರುಣಾ ಚಾಳೇಕರ್‌ ರವರೊಂದಿಗೆ ವಾಹನ ತಪಾಸಣೆ ಮಾಡುತ್ತಿರುವಾಗ ಅಲೆವೂರು ಕಡೆಯಿಂದ ಮಣಿಪಾಲ ಕಡೆಗೆ KA-20 B-9965 ನೇ ಲಾರಿ ಚಾಲಕ ಮಣಿಕಂಠ ಎಂಬವನು ಲಾರಿಯನ್ನು ನಿಲ್ಲಿಸುವಂತೆ ಸೂಚಿಸಿದಾಗ ಚಾಲಕನು ಲಾರಿಯನ್ನು ನಿಲ್ಲಿಸಿ ಓಡಲು ಪ್ರಯತ್ನಿಸಿದಾಗ ಆತನನ್ನು ಹಿಡಿದು ವಿಚಾರಿಸಿ ಲಾರಿಯನ್ನು ಪರಿಶೀಲಿಸಲಾಗಿ ಲಾರಿಯಲ್ಲಿ ಮರಳು ತುಂಬಿರುವುದು ಕಂಡು ಬಂದಿದ್ದು ಲಾರಿ ಚಾಲಕ ಮಣಿಕಂಠನಲ್ಲಿ ವಿಚಾರಿಸಲಾಗಿ ತಾನು ಲಾರಿಯ ಮಾಲಿಕರಾದ ಸುದೇಶ್‌ ಶೆಟ್ಟಿ ರವರು ಹೇಳಿದಂತೆ ಕೆಮ್ತೂರು ಎಂಬಲ್ಲಿ ಮರಳು ಡಕ್ಕೆಯಲ್ಲಿ ಹಿಂದಿಯವರಿಂದ ಮರಳು ಲೋಡ್‌ ಮಾಡಿಕೊಂಡು ಕುಂತಲನಗರಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದು ಆತನಲ್ಲಿ ಮರಳನ್ನು ಸಾಗಾಟ ಮಾಡಲು ಟ್ರಿಪ್‌ ಶೀಟ್‌ ಇಲ್ಲದೇ ಇದ್ದು ಆರೋಪಿತರುಗಳಾದ ಮಣಿಕಂಠ ಹಾಗೂ ಲಾರಿಯ ಮಾಲಿಕರಾದ ಸುದೇಶ್‌ ಶೆಟ್ಟಿ ಸೇರಿಕೊಂಡು ಸರಕಾರಕ್ಕೆ ಯಾವುದೇ ರಾಯಧನವನ್ನು ಭರಿಸದೇ ಸರಕಾರಿ ಹೊಳೆಯಿಂದ ಮರಳನ್ನು ಕಳವು ಮಾಡಿ ಯಾವುದೇ ಪರವಾನಿಗೆ ಇಲ್ಲದೇ ಸಾಗಟ ಮಾರಾಟ ಮಾಡುವ ಸಲುವಾಗಿ ತಂದ KA-20 B-9965 ನೇ ಲಾರಿ ಹಾಗೂ ಲಾರಿಯಲ್ಲಿದ್ದ ಸುಮಾರು 2 ಯುನಿಟ್‌ ಮರಳನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿರುವುದಾಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 218/2025 ಕಲಂ: 303(2), ಜೊತೆಗೆ 3(5) ಬಿ,ಎನ್‌,ಎಸ್-2023 ಮತ್ತು ಕಲಂ: 4(1)(A) 21(4) MMRD Act ರಂತೆ ಪ್ರಕರಣ ದಾಖಲಾಗಿರುತ್ತದೆ.