Home Crime ಉಡುಪಿ : ಗಾಂಜಾ ಸೇವನೆ : ಮೂವರ ಬಂಧನ…!!

ಉಡುಪಿ : ಗಾಂಜಾ ಸೇವನೆ : ಮೂವರ ಬಂಧನ…!!

ಉಡುಪಿ: ನಗರದಲ್ಲಿ ಗಾಂಜಾ ಸೇವಿಸುತ್ತಿದ್ದ  ಪ್ರತ್ಯೇಕವಾಗಿ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರೆಯಾಂಕ್ ಸಂಜಯ್ ಎಂಬಾತನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಮಹಮ್ಮದ್ ಸಾಲಿಕ್ ಹಾಗೂ ಮೊಹಮ್ಮದ್ ಸಲೀಮ್ ನನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ : ಮಣಿಪಾಲ – ದಿನಾಂಕ 01/05/2025 ರಂದು ಮಣಿಪಾಲ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ಅನಿಲ್‌ ಕುಮಾರ್ ರವರು ಠಾಣಾ ಸಿಬ್ಬಂದಿಯವರೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು 80 ಬಡಗುಬೆಟ್ಟು ಗ್ರಾಮದ ಟ್ಯಾಪ್ಮಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಶ್ರೆಯಾಂಕ್‌ ಸಂಜಯ್‌ (21) ಎಂಬಾತನು ಅಮಲಿನಲ್ಲಿದ್ದು, ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವ ಅನುಮಾನದ ಮೇರೆಗೆ ಆತನನ್ನು ವಶಕ್ಕೆ ಪಡೆದು ಮಣಿಪಾಲ ಕೆ ಎಂ ಸಿ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲು ಕಳುಹಿಸಿಕೊಟ್ಟಿದ್ದು, ಆರೋಪಿಯು ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಬಗ್ಗೆ ಮಣಿಪಾಲ ಕೆ ಎಂ ಸಿ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಗಳ ದೃಢಪತ್ರ ನೀಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 78/2025 ಕಲಂ: ಕಲಂ 27 (b) NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಉಡುಪಿ: ದಿನಾಂಕ 07/05/2025 ರಂದು ‌ಉಡುಪಿ ತಾಲೂಕು, ನೇಜಾರಿನ ತೃಪ್ತಿ ಲೇಔಟ್‌ ಪೆಟ್ರೋಲ್‌ ಪಂಪ್‌ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ಮಹಮ್ಮದ್ ಸಾಲಿಕ್‌ (19) ಎಂಬಾತನನ್ನು ವಶಕ್ಕೆ ಪಡೆದು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ತಪಾಸಣೆಗೊಳಪಡಿಸಿದ್ದು, ವೈದ್ಯರು ನೀಡಿದ ವರದಿಯಲ್ಲಿ ಆರೋಪಿಯು ಗಾಂಜಾ ಸೇವನೆ ಮಾಡಿರುವುದು ಧೃಡಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 16/2025 ಕಲಂ: 27 (b) NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ.


ಉಡುಪಿ: ದಿನಾಂಕ 07/05/2025 ರಂದು ‌ಉಡುಪಿ ತಾಲೂಕು, ನೇಜಾರಿನ ಜ್ಯೋತಿ ನಗರದ ಬಸ್ಸು ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ಮೊಹಮ್ಮದ್ ಸಲೀಮ್ (20) ಎಂಬಾತನನ್ನು ವಶಕ್ಕೆ ಪಡೆದು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ತಪಾಸಣೆಗೊಳಪಡಿಸಿದ್ದು, ವೈದ್ಯರು ನೀಡಿದ ವರದಿಯಲ್ಲಿ ಆರೋಪಿಯು ಗಾಂಜಾ ಸೇವನೆ ಮಾಡಿರುವುದು ಧೃಡಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 17/2025 ಕಲಂ: 27 (b) NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ.