ಬೈಂದೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮ ಪಂಚಾಯತ್ ತ್ರಾಸಿ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಕರಾವಳಿ ಕಾವಲು ಪಡೆ, ಎಸ್ ವಿ ಕಾಲೇಜು ಗಂಗೊಳ್ಳಿ, ಪೋಲಿಸ್ ಇಲಾಖೆ ,ಸಾಹಸ್ ಎನ್‌ಜಿಒ ಅವರ ಸ್ವಚ್ಛ ಕರಾವಳಿ ಮಿಷನ್ ಯೋಜನೆ ಹಾಗೂ ಶಓಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅವರ CSR ಸಹಯೋಗದೊಂದಿಗೆ ಸ್ವಚ್ಛತಾ ಹೀ ಸೇವಾ ಹಾಗೂ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಚತಾ ದಿನಾಚರಣೆ
ತ್ರಾಸಿ ಬೀಚ್ ಕಡಲ ತೀರ ಸ್ವಚ್ಛಗೊಳಿಸಿದ ಮೂಲಕ ಸಂಭ್ರಮದಲ್ಲಿ ನಡೆಯಿತು.
ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಿಥುನ್ ದೇವಾಡಿಗ
ನೈರ್ಮಲ್ಯ ಮತ್ತು ಶುಚಿತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸ್ವಚ್ಛತಾ ಹೀ ಸೇವಾ-ಸ್ವಚ್ಛತೆಯೇ ಸೇವೆ
ತ್ರಾಸಿ ಕಡಲತೀರದಲ್ಲಿ ಹಮ್ಮಿಕೊಂಡಿದ್ದೇವೆ ಇದಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರು/ಉಪಾಧ್ಯಕ್ಷರು/ಸರ್ವ ಸದಸ್ಯರು ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಗ್ರಾಮ ಪಂಚಾಯತ್ ತ್ರಾಸಿ , ವಿದ್ಯಾರ್ಥಿಗಳು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

