Home Crime ಕುಂದಾಪುರ : ಕಳ್ಳರು ಮನೆಗೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳು ಕಳವು…!!

ಕುಂದಾಪುರ : ಕಳ್ಳರು ಮನೆಗೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳು ಕಳವು…!!

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಮಹಿಳೆಯೊಬ್ಬರ ಮನೆಯ ಗೊದ್ರೇಜ್ ನಲ್ಲಿ ಇಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ಕಳವುಗೈದ ಘಟನೆ ನಡೆದಿದೆ.

ಕೊಟೇಶ್ವರ ಗ್ರಾಮದ ನಿವಾಸಿ ಪೂಜಾ ಕಿಣಿ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ.

ಕುಂದಾಪುರ ಪೊಲೀಸ್ ಕಳ್ಳತನ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ವಿವರ : ಪಿರ್ಯಾದಿದಾರರಾದ ಪೂಜಾ ಕಿಣಿ (43 ) ಗಂಡ:ರಾಜೇಶ್‌ ಪೈ, ವಾಸ: ಆಟಕೆರೆ ಬಟ್ಟೆ ಅಂಗಡಿ ಎದುರು , ಕೊಟೇಶ್ವರ ಗ್ರಾಮ ಕುಂದಾಪುರ ತಾಲೂಕು ಇವರು ಬಿದ್ಕಲ್‌ ಕಟ್ಟೆಯ KPS ಪ್ರೌಢ ಶಾಲಾ ವಿಭಾಗದ ಶಿಕ್ಷಕಿಯಾಗಿದ್ದು, ಪಿರ್ಯಾದಿದಾರರರು Riddhi ಎಂಬ ಹೆಸರಿನ ಚಿನ್ನದ ಬ್ರಾಸ್‌ ಲೈಟ್‌, ಪವನ ಸರ, ಕೆಂಪು ಕಲ್ಲು ಮುತ್ತಿನ ಸೂರ್ಯಪೆಂಡೆಂಟ್‌, ಸಿಂಗಲ್‌ ಸ್ಕ್ರೂ ಬಳೆ, ಜುಮ್ಕಿ ಬಳೆ, ಕರಿಮಣಿ ನೆಕ್ಲೆಸ್‌ ,ಗೋಲ್ಡನ್‌ ಸಟೋನ್‌ ಪೆಂಡೆಂಟ್‌, ವೆಂಕಟರಮಣ ಪೆಂಡೆಂಟ್‌,ಡಿ ಸಿ ಚೈನ್‌ ,ನೆಕ್ಲೆಸ್‌ ,ಹಸಿರು ಗುಲಾಬಿ ಕಲ್ಲಿನ ಪೆಂಡೆಂಟ್‌, ಸಣ್ಣ ಹವಳದ ಸರ, ವಜ್ರದ ಮೂಗುಬೊಟ್ಟು,-2 ಇವುಗಳನ್ನು ಮನೆಯ ಗೊದ್ರೇಜ್‌ ನಲ್ಲಿ ಇರಿಸಿ ಬೀಗ ಹಾಕಿ ಬೀಗವನ್ನು ಅಲ್ಲಿಯೇ ಇಟ್ಟು ಹೋಗಿದ್ದು , ದಿನಾಂಕ 09/01/2023 ರಂದು ಪಿರ್ಯಾದುದಾರರು ಗೃಹಪ್ರವೇಶ ಕಾರ್ಯಕ್ರಮಕ್ಕೆ ಹೋಗಲು ಗೊದ್ರೇಜ್‌ ನಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನು ನೋಡುವಾಗ ಡಿ ಸಿ ಚೈನ್‌ , ನೆಕ್ಲೆಸ್‌, ಹಸಿರು ಗುಲಾಬಿ ಕಲ್ಲಿನ ಪೆಂಡೆಂಟ್‌ ಮತ್ತು ಕೆಂಪು ಕಲ್ಲು ಮುತ್ತಿನ ಸೂರ್ಯ ಪೆಂಡೆಂಟ್‌ ಇಲ್ಲದಿರುವುದು ಗಮನಕ್ಕೆ ಬಂದಿರುತ್ತದೆ. ಇವುಗಳನ್ನು ಲಾಕರ್‌ ನಲ್ಲಿ ಇಟ್ಟಿರಬಹುದಾಗಿ ಭಾವಿಸಿರುತ್ತಾರೆ. ದಿನಾಂಕ 26/06/2025 ರಂದು ಪಿರ್ಯಾದಿದಾರರು ಕಾರ್ಯಕ್ರಮ ಒಂದಕ್ಕೆ ಹೋಗಲು ತನ್ನ ಮನೆಯ ಗೊದ್ರೇಜ್‌ ಬೀಗವನ್ನು ತೆರೆದು ನೋಡಿದಾಗ ಅದರಲ್ಲಿ ಇಟ್ಟಿದ್ದ ಚಿನ್ನಾಭರಣಗಳ ಪೈಕಿ Riddhi ಹೆಸರಿನ ಬ್ರಾಸ್‌ ಲೈಟ್‌ ಅಂದಾಜು ತೂಕ 11.999 ಗ್ರಾಂ , ಪವನ ಸರ, ಸಿಂಗಲ್‌ ಚಿನ್ನದ ಸ್ಕ್ರೂ ಬಳೆ ಜುಮಕಿ ಎರಡು ಚಿನ್ನದ ಬಳೆಗಳ ಪೈಕಿ ಒಂದು ಬಳೆ ಕರಿಮಣಿ ನೆಕ್ಲೇಸ್‌ ಸರ ಗೋಲ್ಡನ್‌ ಸ್ಟೂನ್‌ ಪೆಂಡೆಂಟ್‌ ಇಲ್ಲದೇ ಇದ್ದು ಅದರ ಸರ ಹಾಗೆ ಇರುತ್ತದೆ. ವೆಂಕಟರಮಣ ಪೆಂಡೆಂಟ್‌ ವಜ್ರದ ಮೂಗು ಬೊಟ್ಟು-2 ಹವಳದ ಸರ ಒಟ್ಟು ಸುಮಾರು 23 ಪವನ್‌ ಚಿನ್ನಾಭರಣಗಳು ಅಂದಾಜು ಮೌಲ್ಯ 18 ಲಕ್ಷ ರೂಪಾಯಿ ಇವುಗಳನ್ನು ಯಾರೋ ಕಳ್ಳರು ಕಳುವು ಮಾಡಿ ಹೋಗಿರುವುದಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 143/2025 ಕಲಂ: 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ.