Home Latest ಉಡುಪಿ ಹೆಮ್ಮೆ : ಮಿಸ್ ಯೂನಿವರ್ಸ್ ಇಂಡಿಯಾ ಟಾಪ್-50ರಲ್ಲಿ ಸ್ಪೂರ್ತಿ ಶೆಟ್ಟಿ…!!

ಉಡುಪಿ ಹೆಮ್ಮೆ : ಮಿಸ್ ಯೂನಿವರ್ಸ್ ಇಂಡಿಯಾ ಟಾಪ್-50ರಲ್ಲಿ ಸ್ಪೂರ್ತಿ ಶೆಟ್ಟಿ…!!

ಉಡುಪಿ : ಜಿಲ್ಲೆಯ ಪ್ರತಿಭಾವಂತ ಯುವತಿ ಸ್ಪೂರ್ತಿ ಶೆಟ್ಟಿ ಅವರು ಪ್ರತಿಷ್ಠಿತ ಮಿಸ್ ಯೂನಿವರ್ಸ್ ಇಂಡಿಯಾ 2026 ಸ್ಪರ್ಧೆಯ ಟಾಪ್-50 ಸ್ಪರ್ಧಿಗಳ ಪಟ್ಟಿಯಲ್ಲಿ ಸ್ಥಾನ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ತಮ್ಮ ಆತ್ಮವಿಶ್ವಾಸ, ಪ್ರತಿಭೆ, ಸೌಂದರ್ಯ ಹಾಗೂ ವ್ಯಕ್ತಿತ್ವದ ಮೂಲಕ ರಾಷ್ಟ್ರಮಟ್ಟದ ವೇದಿಕೆಯಲ್ಲಿ ಗಮನ ಸೆಳೆದಿರುವ ಸ್ಪೂರ್ತಿ ಶೆಟ್ಟಿ, ಮುಂದಿನ ಹಂತದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.

ಈ ಸಾಧನೆಯ ಮೂಲಕ ಉಡುಪಿ ಜಿಲ್ಲೆಯ ಯುವ ಪ್ರತಿಭೆಗಳಿಗೆ ಅವರು ಸ್ಫೂರ್ತಿಯಾಗಿದ್ದು, ರಾಜ್ಯದ ಜನರಿಂದಲೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಮುಂದಿನ ಹಂತಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಕಿರೀಟ ಮುಡಿಗೇರಿಸಲಿ ಎಂಬ ಶುಭಾಶಯಗಳು ವ್ಯಕ್ತವಾಗುತ್ತಿವೆ.