ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಪ್ರಸಾದ್ ಯಾನೆ ರಬಡ ಎಂದು ತಿಳಿದು ಬಂದಿದೆ.
ಪ್ರಕರಣದ ವಿವರ: ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಾರೆಂಟ್ ಆಸಾಮಿಯಾದ ಪ್ರಸಾದ್ @ ರಬಡ(22) , ತಂದೆ: ದಿ.ಬಸವರಾಜ್, ಕರ್ಕಿ ಗುಡ್ಡೆ, ಹಟ್ಟಿಯಂಗಡಿ ಗ್ರಾಮ, ಕುಂದಾಪುರ ತಾಲೂಕು ಜಿಲ್ಲೆ ಎಂಬಾತನ ಮೇಲೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ- 4, ಕುಂದಾಪುರ ನಗರ ಠಾಣೆಯಲ್ಲಿ- 2 ಪ್ರಕರಣ ಮತ್ತು ಮಣಿಪಾಲ ಪೊಲೀಸ್ ಠಾಣೆಯಲ್ಲಿ- 1 ರಂತೆ ಕೊಲೆಯತ್ನ, ಕಳ್ಳತನ ಹಾಗೂ NDPS ನಂತಹ ಒಟ್ಟು 7 ಪ್ರಕರಣಗಳು ದಾಖಲಾಗಿರುತ್ತದೆ. ಈತನ ಮೇಲೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕುಂದಾಪುರದ SC No: 504/2025, SC No:527/2025ರಲ್ಲಿ NBW ವಾರೆಂಟ್ ಹೊರಡಿಸಿರುತ್ತದೆ.
ಈತನ ವಿರುದ್ದ 2026ನೇ ಫೆಬ್ರವರಿ ತಿಂಗಳಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 07/2026 ಕಲಂ: 109, 352, 351(2), 118(2) R/w 3(5) BNS ರಂತೆ ಪ್ರಕರಣ ದಾಖಲಾಗಿದ್ದು ಸುಮಾರು 6 ತಿಂಗಲಿಂದ ತಲೆಮರೆಸಿಕೊಂಡಿರುವುದಾಗಿದೆ. ದಿನಾಂಕ: 16.07.2026ರಂದು ಬೆಳಗ್ಗಿನ ಜಾವ ಭಟ್ಕಳದಲ್ಲಿ ಇರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸ್ ವೃತ್ತ ನಿರೀಕ್ಷಕರು ಸಂತೋಷ ಎ ಕಾಯ್ಕಿಣಿ ರವರ ಮಾರ್ಗದರ್ಶನದಲ್ಲಿ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರು (ಕಾ.ಸು) ನಿರಂಜನ್ ಗೌಡ ಮತ್ತು ಪೊಲೀಸ್ ಉಪನಿರೀಕ್ಷಕರು (ತನಿಖೆ) ಚಂದ್ರಕಲಾ ಮ ಪತ್ತಾರ ರವರ ನೇತ್ರತ್ವದಲ್ಲಿ ಠಾಣಾ ಸಿಬ್ಬಂದಿಯವರಾದ ಪಿಸಿ ಶ್ರೀಧರ್ ಪಾಟೀಲ್ ಮತ್ತು ಪಿಸಿ ಕಿರಣ್ ಬಿ ಪಾಟೀಲ್ ರವರು ಸದ್ರಿ ಸ್ಥಳಕ್ಕೆ ತೆರಳಿ ವಾರೆಂಟ್ ಆಸಾಮಿ ಪ್ರಸಾದ್@ರಬಡನನ್ನು ವಶಕ್ಕೆ ಪಡೆದುಕೊಂಡಿದ್ದು, ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕುಂದಾಪುರಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.




