Home Crime ವೃದ್ಧರೊಬ್ಬರಿಗೆ ದೈಹಿಕ ಹಿಂಸೆ : ಹೆಂಡತಿ ಹಾಗೂ ಮಕ್ಕಳ ವಿರುದ್ಧ ದೂರು…!!

ವೃದ್ಧರೊಬ್ಬರಿಗೆ ದೈಹಿಕ ಹಿಂಸೆ : ಹೆಂಡತಿ ಹಾಗೂ ಮಕ್ಕಳ ವಿರುದ್ಧ ದೂರು…!!

ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲ ‌ಸಮೀಪ ವೃದ್ಧರೊಬ್ಬರಿಗೆ ಹೆಂಡತಿ‌ ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿ ಮನೆಯಿಂದ ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ಅರ್ಧ ದಾರಿಯಲ್ಲಿ ಬಿಟ್ಟುಹೋದ ಘಟನೆ ಸಂಭವಿಸಿದೆ.

ಜಗದೀಶ್ ಶೆಟ್ಟಿ ಎಂಬವರಿಗೆ ಹೆಂಡತಿ ಮಕ್ಕಳು ಸೇರಿ ಹಿಂಸೆ ನೀಡಿದ್ದಾರೆ ಎಂದು ಅವರು ಮಣಿಪಾಲ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣದ ವಿವರ: ಪಿರ್ಯಾದಿದಾರರಾದ ಜಗದೀಶ ಶೆಟ್ಟಿ (67) ಇವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವಾಗ ಪಿರ್ಯಾದಿದಾರರ ಹೆಂಡತಿ ಸುನಂದ ಹೆಣ್ಣು ಮಕ್ಕಳಾದ ಶ್ವೇತಾ, ನೀತಾ ಮತ್ತು ಮಗನಾದ ನಿತಿನ್‌ ರವರು ಪಿರ್ಯಾದಿದಾರರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡಿ ಅವರಿಗೆ ಊಟ ತಿಂಡಿ ನೀಡದೇ ಹಾಗೂ ಅವರಿಗೆ ಚಿಕಿತ್ಸೆ ಕೊಡಿಸದೇ ದಿನಾಂಕ 11/07/2026 ರಂದು ಬೊಂಬಾಯಿ ಪನ್ವೆಲ್‌ ನಿಂದ ಬಲವಂತವಾಗಿ ಉಡುಪಿಗೆ ಕರೆದುಕೊಂಡು ಬಂದು ದಿನಾಂಕ 12/07/2026 ರಂದು ಬೆಳಿಗ್ಗೆ 8:30 ಗಂಟೆ ಸಮಯಕ್ಕೆ ಪಿರ್ಯಾದಿದಾರರನ್ನು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ಸ್ಟೇಷನ್‌ ಬಳಿ ಪಿರ್ಯಾದಿದಾರರನ್ನು ನೋಡುವುದಿಲ್ಲ ಎಂದು ತ್ಯಜಿಸಿ ರಿಕ್ಷಾದಲ್ಲಿ ಬಿಟ್ಟು ಅಲ್ಲಿಂದ ಎಲ್ಲಿಗೋ ಹೋಗಿರುತ್ತಾರೆ. ಪಿರ್ಯಾದಿದಾರರು ಹಿರಿಯ ನಾಗರೀಕರಾಗಿದ್ದು ಅವರ ರಕ್ಷಣೆ ಹಾಗೂ ಆರೈಕೆಗೆ ಜವಬ್ದಾರಿಯಾಗಿರುವ ಅವರ ಹೆಂಡತಿ ಮಕ್ಕಳು ಅವರ ಆರೈಕೆ ಮತ್ತು ರಕ್ಷಣೆ ಮಾಡದೇ ತೊಂದರೆ ನೀಡುತ್ತಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 109/2026 ಕಲಂ: 24 Maintenance and Welfare Of Parents and Senior Citizens Act 2007 ರಂತೆ ಪ್ರಕರಣ ದಾಖಲಾಗಿರುತ್ತದೆ.