ಬೈಂದೂರು: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕುಡೂರು ಮನೆಯವರ ಯಜಮಾನಿಕೆಯ ಎಲ್ಲೂರು ಕಂಬಳ ಗುರುವಾರ ಸಂಜೆ ವೈಭವದಿಂದ ನಡೆಯಿತು.
ಜಿಲ್ಲೆಯ ಹಿರಿಯ ಧಾರ್ಮಿಕ ಮುಖಂಡರಾದ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ನಡೆದ ಕಂಬಳ ಮಹೋತ್ಸವಕ್ಕೆ ಕುಡೂರು ಮನೆಯ ಯಜಮಾನರಾದ ರಾಮ್‌ಕಿಶನ್ ಹೆಗ್ಡೆ ಅವರು ಕೋಣದ ಮಾಲಿಕರಿಗೆ ತಾಂಬೂಲ ಗೌರವ ನೀಡುವ ಮೂಲಕ ಚಾಲನೆ ನೀಡಿದರು.
ಶಾಸಕ ಗುರುರಾಜ್ ಗಂಟಿಹೊಳೆ, ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ರಾಮ್‌ರತನ್ ಹೆಗ್ಡೆ, ಅನುಪಮಾ ಎಸ್ ಶೆಟ್ಟಿ, ಪ್ರೀತಮ್ ಎಸ್ ರೈ, ಶ್ರೀಶಾ ರೈ, ವೈಷ್ಣಮಿ ಆರ್ ಹೆಗ್ಡೆ, ಸರ್ಜಿತ್ ಶೆಟ್ಟಿ ಕುಡೂರು, ಮೋಹನ್‌ದಾಸ್ ಶೆಟ್ಟಿ ಕುಡೂರು, ಎಂ.ಆರ್.ಶೆಟ್ಟಿ, ಎಂ.ರಘುರಾಮ್ ಶೆಟ್ಟಿ ಇದ್ದರು.
ಉಡುಪಿ ಹಾಗೂ ಕಾರವಾರ ಜಿಲ್ಲೆಯ 48 ಜೊತೆ ಕೋಣಗಳು, ಕಂಬಳ ಗದ್ದೆಯಲ್ಲಿ ಓಟ ನಡೆಸಿದ್ದವು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಮಂಗಳೂರು ವಿಶ್ವವಿದ್ಯಾಲಯದ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯ ರಾಜೇಶ್ ಕೆ.ಸಿ, ಬೈಂದೂರು ರೈತ ಸಂಘದ ಅಧ್ಯಕ್ಷ ಎನ್.ದೀಪಕ್‌ಕುಮಾರ ಶೆಟ್ಟಿ, ರಾಜ್ಯ ಕಂಬಳ ಅಸೋಸಿಯೇಶನ್ ಸದಸ್ಯ ವಿಕ್ರಂ ವೆಂಕಟ ಪೂಜಾರಿ, ಬೈಂದೂರು ಕಂಬಳ ಸಮಿತಿ ಅಧ್ಯಕ್ಷ ಮಂಜುನಾಥ ಪೂಜಾರಿ ಸಸಿಹಿತ್ಲು, ಕಾರ್ಯದರ್ಶಿ ಸುಧೀರ್ ದೇವಾಡಿಗ, ಕೋಶಾಧಿಕಾರಿ ಭರತ್ ಕೊಠಾರಿ, ಪರಮೇಶ್ವರ ಭಟ್ ಬೊಳಂಬಳ್ಳಿ, ನಿವೃತ್ತ ಮುಖ್ಯ ಶಿಕ್ಷಕ ರತ್ನಾಕರ್ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಚುಚ್ಚಿ ನಾರಾಯಣ ಶೆಟ್ಟಿ, ಉದ್ಯಮಿ ಸತೀಶ್ ಶೆಟ್ಟಿ ಅರೆ ಶಿರೂರು, ಗಣಪ ಗಂಗನಾಡು, ಶಿವರಾಂ ಶೆಟ್ಟಿ ಎಲ್ಲೂರು, ರವಿ ಹೋಬಳಿದಾರ್ , ಆನಂದ್ ನಾಯ್ಕ್ ಸಣ್ಣಮನೆ, ಕುಮಾರ ನಾಯ್ಕ್, ಗೌಡ ಅಣ್ಣಪ್ಪ ಮರಾಠಿ ಎಲ್ಲೂರು ಇದ್ದರು.
ಕೀಶೋರ್ ಪೂಜಾರಿ ಸಸಿಹಿತ್ಲು, ಕಿರಣ್ ಬಿಜೂರು, ಗಣೇಶ್ ಕೊಠಾರಿ ಉದ್ಘೋಷಕರಾಗಿದ್ದರು.
ಬಹುಮಾನ ವಿತರಣೆ :
ಕಂಬಳ ಉತ್ಸವದ ನಾಲ್ಕು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಇತರ ಗಣ್ಯರು ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಿದರು.
ಹಲಗೆ : ಶ್ರೀ ಸ್ವಾಮಿಧಾಮ ಹೊಳೆಕಟ್ಟು ಕುಂಭಾಶಿ ಕೋಣಗಳು (ಪ್ರಥಮ), ತೆಕ್ಕಟ್ಟೆ ಸುಧೀರ್ ದೇವಾಡಿಗ(ಸವಾರಿಗ). ದಿ.ಶುಕ್ರ ಪೂಜಾರಿ ಮೊಳೆಬೈಲ್ ಕೋಣಗಳು (ದ್ವಿತೀಯ), ಭರತ್ ಶಿರೂರು ಮುದ್ದುಮನೆ(ಸವಾರಿಗ).
ಹಗ್ಗ ಹಿರಿಯ : ದಿ.ವೆಂಕಟ ಪೂಜಾರಿ ಸಸಿಹಿತ್ಲು ಎ ಕೋಣಗಳು (ಪ್ರಥಮ)
ಮಂಜುನಾಥ ಗೌಡ ಬೈಂದೂರು (ಸವಾರಿಗ). ದಿ.ವೆಂಕಟ ಪೂಜಾರಿ ಸಸಿಹಿತ್ಲು ಬಿ ಕೋಣಗಳು (ದ್ವಿತೀಯ), ಮಂಜುನಾಥ ಗೌಡ ಬೈಂದೂರು (ಸವಾರಿಗ).
ಹಗ್ಗ ಕಿರಿಯ : ದುರ್ಗಾ ಫ್ರೆಂಡ್ಸ್ ಕಂಚಿಕಾನ್ ಕೋಣಗಳು (ಪ್ರಥಮ), ಮಂಜುನಾಥ್ ಗೌಡ ಬೈಂದೂರು (ಸವಾರಿಗ). ಗಿರಿಜಾ ರೋಡ್‌ಲೈನ್ಸ್ ಗಾಡಿ ಕೂಸ ಪೂಜಾರಿ ಕೋಟ ಕೋಣಗಳು(ದ್ವಿತೀಯ), ಮಂಜುನಾಥ್ ಗೌಡ ಬೈಂದೂರು (ಸವಾರಿಗ).
ಹಗ್ಗ ಅತಿ ಕಿರಿಯ :
ಶ್ರೀ ಸ್ಕಂದ ಆರ್ವಿಕ್ ಪ್ರದೀಪ್ ಉಳ್ಳೂರು ಕಂದಾವರ ಕೋಣಗಳು (ಪ್ರಥಮ), ಹರೀಶ್ ಪೂಜಾರಿ ಬೈಂದೂರು(ಸವಾರಿಗ). ಶಂಕು ಮಹಾಸತಿ ಸಂಕಡಗುಂಡಿ ಶಿರೂರ್ ಕೋಣಗಳು(ದ್ವಿತೀಯ), ಶಂಕರ್ ದೇವಾಡಿಗ ನಾಗೂರು(ಸವಾರಿಗ),
ಸುಜಿತ್ ಸುಪ್ರೀತ್ ಗಣಪ ಗಂಗನಾಡು ಕೋಣಗಳು(ತೃತೀಯ), ವಿಶ್ವನಾಥ್ ದೇವಾಡಿಗ ಬೈಂದೂರು (ಸವಾರಿಗ)



