Home Karavali Karnataka ಉಡುಪಿ ಜಿಲ್ಲಾ ಪೊಲೀಸ್ ನೌಕರರ ಸಹಕಾರ ಸಂಘ(ನಿ.) – ವಾರ್ಷಿಕ ಮಹಾಸಭೆ..!!

ಉಡುಪಿ ಜಿಲ್ಲಾ ಪೊಲೀಸ್ ನೌಕರರ ಸಹಕಾರ ಸಂಘ(ನಿ.) – ವಾರ್ಷಿಕ ಮಹಾಸಭೆ..!!

ಉಡುಪಿ ಜಿಲ್ಲಾ ಪೊಲೀಸ್ ನೌಕರರ ಸಹಕಾರ ಸಂಘ(ನಿ.) ಇದರ ವಾರ್ಷಿಕ ಮಹಾಸಭೆಯು ದಿನಾಂಕ 19-09-2025 ರಂದು ಜಿಲ್ಲಾ ಪೊಲೀಸ್‌ ಕಛೇರಿಯ ಸೆಂಟಿನಲ್ ಹಾಲ್, ಉಡುಪಿ ಇಲ್ಲಿ ನಡೆಯಿತು. ಮುಖ್ಯ ಅಥಿತಿಯಾಗಿ ಶ್ರೀ ಹರಿರಾಮ್‌ ಶಂಕರ್ ಐ.ಪಿ.ಎಸ್., ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ ರವರು, ಸಭೆಯ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗು ಸಂಘದ ಅಧ್ಯಕ್ಷರಾದ ಶ್ರೀ ಸುಧಾಕರ ಎಸ್‌. ನಾಯ್ಕ್ ಕೆ.ಎಸ್.ಪಿ.ಎಸ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ ವಹಿಸಿಕೊಂಡಿದ್ದರು ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ತಿಮ್ಮಪ್ಪ ಗೌಡ ಜಿ. ಡಿ.ವೈ.ಎಸ್.ಪಿ.(ಸಶಸ್ತ್ರ) ಉಪಸ್ಥಿತರಿದ್ದರು. ಅಲ್ಲದೆ ಸಂಘದ ಎಲ್ಲಾ ನಿರ್ದೇಶಕರು ಹಾಜರಿದ್ದರು.

ಅಧ್ಯಕ್ಷರು ಸಂಘದ 2024-25 ನೇ ವರ್ಷದಲ್ಲಿ ಸದಸ್ಯರಿಗೆ 14% ಡಿವಿಡೆಂಡ್ ಫೋಷಿಸಿದರು. ಪೊಲೀಸ್‌ ಅಧೀಕ್ಷಕರು ಎಸ್.‌ ಎಸ್.‌ ಎಲ್.‌ ಸಿ. ಹಾಗೂ ಪಿ.ಯು.ಸಿ. ಯಲ್ಲಿ 85% ಗಿಂತ ಅಧಿಕ ಅಂಕ ಗಳಿಸಿದ 52 ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಿ ಹಿತವಚನ ನುಡಿದರು. ಉದಯಕುಮಾರ್ ಪ್ರಾರ್ಥನೆಗೈದರು, ರಾಘವೇಂದ್ರ ದೇವಾಡಿಗ ಇವರು ಸ್ವಾಗತಿಸಿದರು. ಸಂಘದ ಖಾಸಗಿ ಕಾರ್ಯದರ್ಶಿ, ಜಯಶೀಲ್ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು, ಶಿವಾನಂದ ಬಿ. ಇವರು ವಂದನಾರ್ಪಣೆಗೈದರು. ಕಾರ್ಯಕ್ರಮ ನಿರೂಪಣೆ ಯೋಗೇಶ್‌ ನಾಯ್ಕ್ ರವರು ಮಾಡಿದರು.