ಕಾಪು: ನಗರದ ಸಮೀಪ ವ್ಯಕ್ತಿಯೊಬ್ಬರು ಮನೆಯಿಂದ ಹೊರಗಡೆ ಹೋದವರು ನಾಪತ್ತೆಯಾದ ಘಟನೆ ಸಂಭವಿಸಿದೆ.
ನಾಪತ್ತೆಯಾದವರು ಶೇಖರ ಎಂದು ತಿಳಿಯಲಾಗಿದೆ.
ಕಾಪು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆ : ಪಿರ್ಯಾದಿದಾರರಾದ ವಿದ್ಯಾಧರ (48),ಏಣಗುಡ್ಡೆ ಗ್ರಾಮ, ಕಾಪು ಇವರ ತಂದೆ ಶೇಖರ (73)ರವರು ವಯೋವೃದ್ಧರಾಗಿದ್ದು ಮನೆಯಲ್ಲಿಯೇ ಇದ್ದು, ದಿನಾಲು ಬೆಳಿಗ್ಗೆ ಮತ್ತು ಸಂಜೆ ಕಟಪಾಡಿ ಪೇಟೆಗೆ ಹೋಗಿ ವಾಪಸ್ಸು ಮನೆಗೆ ಹೋಗುತ್ತಿದ್ದು, ಒಮ್ಮೊಮ್ಮೆ ಮನೆಯ ಬದಿಯಲ್ಲಿರುವ ಹೊಳೆಯಲ್ಲಿ ಮೀನು ಹಿಡಿಯಲು ಹೋಗುತ್ತಿದ್ದರು. ಇತ್ತೀಚೆಗೆ ಅವರಿಗೆ ಹರ್ನಿಯಾ ಖಾಯಿಲೆ ಕಾಣಿಸಿಕೊಂಡಿದ್ದು ಅವರನ್ನು ಉಡುಪಿಯ ಸಿಟಿ ಆಸ್ಪತ್ರೆಯಲ್ಲಿ ವೈದ್ಯರಿಂದ ತಪಾಸಣೆಗೆ ಒಳಪಸಿದ್ದು ವೈದ್ಯರ ಸಲಹೆಯಂತೆ ದಿನಾಂಕ 30/05/2025 ರಂದು ಸರ್ಜರಿಗೆ ಹೋಗಲು ನಿರ್ಧರಿಸಿದ್ದು, ಶೇಖರ ರವರು ದಿನಾಂಕ 29/05/2025 ರಂದು ಬೆಳಿಗ್ಗೆ 06:00 ಗಂಟೆಗೆ ಮನೆಯಿಂದ ಹೋದವರು ವಾಪಸ್ಸು ಮನೆಗೆ ಬಾರದೇ ಇದ್ದುದನ್ನು ತಿಳಿದು ಕಟಪಾಡಿ ಪೇಟೆ, ಹೊಳೆಯ ಬದಿ, ಉಡುಪಿ, ಸಂತೆಕಟ್ಟೆ, ಬಂಟಕಲ್ಲು, ಪಡುಬಿದ್ರಿ ಮುಂತಾದ ಕಡೆಗಳಲ್ಲಿ ಹುಡುಕಾಡಿ ಸಂಬಂಧಿಕರ ಹಾಗೂ ಪರಿಚಯಸ್ಥರ ಮನೆಯಲ್ಲಿ ವಿಚಾರಿಸಿದಲ್ಲಿ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 77/2025, ಕಲಂ:ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.