Home Karavali Karnataka ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಪತ್ರಕರ್ತನ ಚಿಕಿತ್ಸೆಗೆ ಆರ್ಥಿಕ ನೆರವಿಗೆ ಮನವಿ…!!

ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಪತ್ರಕರ್ತನ ಚಿಕಿತ್ಸೆಗೆ ಆರ್ಥಿಕ ನೆರವಿಗೆ ಮನವಿ…!!

ಉಡುಪಿ : ಜೀವನದಲ್ಲಿ ಸಾಧನೆ ತೋರಬೇಕಾದ ಯುವ ಪತ್ರಕರ್ತ ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವದ ನಿವಾಸಿ ಸಂದೀಪ್ ಪೂಜಾರಿ, ಮಾಧ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಯುವ ಪತ್ರಕರ್ತರು.

ನಾಡಿನ ಹೆಸರಾಂತ ಸುದ್ದಿ ವಾಹಿನಿಗಳಾದ ಪಬ್ಲಿಕ್ ಟಿವಿಯ ಕ್ಯಾಮರಮ್ಯಾನ್ ಆಗಿ ಬಳಿಕ ಬಿ ಟಿವಿಯ ಕ್ಯಾಮರಮ್ಯಾನ್ ವರದಿಗಾರರಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಈಟಿವಿ ಭಾರತ್ ವಾಹಿನಿ ಸುದ್ದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಲೈವ್ ವಾಹಿನಿಗಳಾದ ಸಿ4ಯು, ಪ್ರೈಮ್ ಕಾರ್ಲದಲ್ಲಿ ತಂತ್ರಜ್ಞರಾಗಿ ಗುರುತಿಸಿಕೊಂಡಿದ್ದರು.

ಮೂರು ವಾರಗಳ ಹಿಂದೆ ದೇವರ ದರ್ಶನಕ್ಕೆಂದು ಬೆಂಗಳೂರಿಗೆ ತೆರಳಿ ವಾಪಾಸಾಗುತ್ತಿದ್ದ ವೇಳೆ ಹಾಸನ ಜಿಲ್ಲೆ ಸಕಲೇಶಪುರ ಸಮೀಪದಲ್ಲಿ ಸಂದೀಪ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು ಈ ವೇಳೆ ಅವರ ಬೆನ್ನು ಹುರಿ(ಸ್ಪೈನಲ್ ಕಾಡ್) ಗೆ ತೀವ್ರ ಪೆಟ್ಟಾಗಿದ್ದು ಕಳೆದ 15 ದಿನಗಳಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಅವರ ಬೆನ್ನು ಹುರಿಯ ಶಸ್ತ್ರಚಿಕಿತ್ಸೆ ನಡೆದಿದ್ದು ಇನ್ನೂ ಹಲವು ಸಮಯದ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಯಬೇಕಾಗಿದೆ.

ಸಂದೀಪ್ ಒಂದು ಬಡ ಕುಟುಂಬದಿಂದ ಬಂದಿದ್ದು, ಜೀವನದಲ್ಲಿ ಏನಾದರೂ ಸಾಧನೆ ತೋರಬೇಕು ಎನ್ನುವ ಛಲಗಾರ ಪತ್ರಕರ್ತರಾಗಿದ್ದರು. ತಂದೆ ತಾಯಿಗೆ ಒಬ್ಬನೇ ಆಧಾರ ಸ್ತಂಭವಾಗಿದ್ದು ಆತನಿಗಾದ ಅಪಘಾತದಿಂದಾಗಿ ಮನೆಯವರಿಗೆ ದಿಕ್ಕು ತೋಚದಂತಾಗಿದೆ. ಈಗಾಗಲೇ ಆತನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣ ವ್ಯಯವಾಗಿದ್ದು, ಅದನ್ನೆಲ್ಲಾ ಭರಿಸುವ ಶಕ್ತಿ ಆತನ ಕುಟುಂಬಕ್ಕಿಲ್ಲ. ಆದ್ದರಿಂದ ಸಹೃದಯಿಗಳಾದ ತಮ್ಮ ಸಹಕಾರವನ್ನು ಬಯಸುತ್ತಿದ್ದೇವೆ. ತಮ್ಮ ಸಹಕಾರದಿಂದ ಒರ್ವ ಯುವ ಪತ್ರಕರ್ತ ಮತ್ತೆ ಎದ್ದು ಒಡಾಡುವಂತಾಗಲಿ ಎಂಬ ಕಳಕಳಿ ನಮ್ಮದಾಗಿದೆ. ನಿಮ್ಮ ಆರ್ಥಿಕ ನೆರವು ಆತನ ಚಿಕಿತ್ಸೆಗೆ ಉಪಯೋಗವಾಗಲಿದೆ.

ಸಂದೀಪ್ ಅವರ ಬ್ಯಾಂಕ್ ಖಾತೆ ವಿವರ
Sandeep Kumar
Account Number 54058808816
IFSC code:SBIN0040532 State Bank of India, Shirva Branch