Home Crime ಹಿರಿಯಡ್ಕ : ರೆಸಾರ್ಟ್ ನಲ್ಲಿ ಅಂದರ್ ಬಾಹರ್ : 26 ಮಂದಿ ಅಂದರ್…!!

ಹಿರಿಯಡ್ಕ : ರೆಸಾರ್ಟ್ ನಲ್ಲಿ ಅಂದರ್ ಬಾಹರ್ : 26 ಮಂದಿ ಅಂದರ್…!!

ಹಿರಿಯಡ್ಕ: ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪ ರೆಸಾರ್ಟ್ ವೊಂದರಲ್ಲಿ ಇಸ್ಪೀಟು ಜುಗಾರಿ‌ ಆಟ ನಡೆಯುತ್ತಿರುವಾಗ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 26 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ರೆಸಾರ್ಟ್ ವೊಂದರಲ್ಲಿ ಮೆಹಂದಿ ಕಾರ್ಯಕ್ರಮ ನಡೆಯುತ್ತಿತ್ತು‌, ಆನಂತರ ಕೆಲವರು ಸೇರಿ‌ ಅಂದರ್ ಬಾಹರ್ ಜುಗಾರಿ‌ ಆಟ ಆಡಿದ್ದಾರೆ. ಇದರಲ್ಲಿ ಕೆಲವು ಉದ್ಯಮಿಗಳು ಕೂಡ ಇದ್ದರು ಎನ್ನಲಾಗಿದೆ.

ಮಾಹಿತಿ ಮೇರೆಗೆ  ಪೊಲೀಸರು ದಾಳಿ ನಡೆಸಿ 26 ಮಂದಿಯನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಧಿತರ ವಿವರಗಳು ತಿಳಿದು ಬರಬೇಕಿದೆ. ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.