Home Crime ಧರ್ಮಸ್ಥಳ: ಕೆರೆಗೆ ಬಿದ್ದು ಮಹಿಳೆ ಸಾವು…!!

ಧರ್ಮಸ್ಥಳ: ಕೆರೆಗೆ ಬಿದ್ದು ಮಹಿಳೆ ಸಾವು…!!

ಧರ್ಮಸ್ಥಳ: ಕೆರೆಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದು, ಮರಣದಲ್ಲಿ ಸಂಶಯ ವ್ಯಕ್ತವಾಗಿ ಪ್ರಕರಣ ದಾಖಲಾದ ಘಟನೆ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಗುಂಡಿಕಂಡದಲ್ಲಿ ನಡೆದಿದೆ.

ಮೃತರನ್ನು ಚಿನ್ನಮ್ಮ @ ಚಿತ್ರಾವತಿ (46) ಎಂದು ಗುರುತಿಸಲಾಗಿದೆ. ಇವರು ಮೂಲತಃ ಸಿರಿಬಾಗಿಲು ಗ್ರಾಮದವರಾಗಿದ್ದು, ಸುಮಾರು 20 ವರ್ಷಗಳ ಹಿಂದೆ ತನಿಯಪ್ಪ ಗೌಡ ಎಂಬವರಿಗೆ ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.

ಬೆಳಿಗ್ಗೆ 8:00 ಗಂಟೆಯ ನಡುವೆ ಶಿಶಿಲ ಗ್ರಾಮದ ಗುಂಡಿಕಂಡದಲ್ಲಿ ನೆರೆಮನೆಯ ಕುಶಾಲಪ್ಪ ಗೌಡ ಎಂಬವರ ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತೆ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರುವಂತೆ ಕಂಡುಬರುತ್ತಿದೆ, ಆದರೆ ಮೃತರ ಸಾವಿನಲ್ಲಿ ಸಂಶಯವಿದೆ ಎಂದು ಸಹೋದರ ಗಂಗಾಧರ ಗೌಡ (47) ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ UDR ಕ್ರಮಾಂಕ 70/2026, ಕಲಂ 194(3)(iv) BNSS 2023 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿನ ನಿಖರ ಕಾರಣ ತಿಳಿದುಬರಲಿದೆ.