ಉಡುಪಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕುಶಾಲ್ ಶೆಟ್ಟಿ (55) ಎಂಬುವವರು ಜೂ.28ರಂದು ಸಂಜೆ 7.30ರ ಸುಮಾರಿಗೆ ತನ್ನ ಮಗನೊಂದಿಗೆ ಗಲಾಟೆ ಮಾಡಿ, ಮನೆ ಬಿಟ್ಟು ಹೋಗುವುದಾಗಿ ಹೇಳಿ ತನ್ನ ಓಮ್ಮಿ ಕಾರಿನಲ್ಲಿ ಬಟ್ಟೆ ಬರೆಯೊಂದಿಗೆ ಹೋದವರು ಈ ವರೆಗೂ ಮನೆಗೆ ವಾಪಾಸು ಬಾರದೇ ನಾಪತ್ತೆ ಯಾಗಿದ್ದಾರೆ.
ಅವರ ಬಗ್ಗೆ ಮಾಹಿತಿ ದೊರೆತಲ್ಲಿ ಹೆಬ್ರಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.




