Home Crime ಆಟೋ-ಬೈಕ್ ಢಿಕ್ಕಿ : ಚಿಕಿತ್ಸೆ ಫಲಿಸದೆ ವೃದ್ಧೆ ಸಾವು…!!

ಆಟೋ-ಬೈಕ್ ಢಿಕ್ಕಿ : ಚಿಕಿತ್ಸೆ ಫಲಿಸದೆ ವೃದ್ಧೆ ಸಾವು…!!

ಅಂಕೋಲಾ: ರಕ್ತ ಪರೀಕ್ಷೆಗಾಗಿ ಮಗನೊಂದಿಗೆ ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೃದ್ಧೆಯೊಬ್ಬರು ಆಟೋ ರಿಕ್ಷಾ ಡಿಕ್ಕಿಯಾದ ಪರಿಣಾಮ ಮೃತಪಟ್ಟಿರುವ ದುರ್ಘಟನೆ ಪಟ್ಟಣದ ಅಂಬಾರಕೊಡ್ಲ ತಿರುವಿನಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.

ತಾಲೂಕಿನ ಶಿರಕುಳಿ ಗ್ರಾಮದ ಲಲಿತಾ ನಾಯ್ಕ (74) ಮೃ. ತ ದುರ್ದೈವಿ.

ಅನಾರೋಗ್ಯದ ಹಿನ್ನೆಲೆ ಶನಿವಾರ ಬೆಳಿಗ್ಗೆ ಮಗ ರವಿ ನಾಯ್ಕ ಅವರೊಂದಿಗೆ ಬೈಕ್‌ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದರು. ಅಂಬಾರಕೊಡ್ಲ ಸಮೀಪದ ತಿರುವಿನಲ್ಲಿ ಸಾಗುತ್ತಿದ್ದ ವೇಳೆ ಎದುರಿನಿಂದ ಬಂದ ಆಟೋ ರಿಕ್ಷಾ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಲಲಿತಾ ನಾಯ್ಕ ಅವರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.