Home Crime ವ್ಯಕ್ತಿಯೋರ್ವರಿಗೆ ಚಾಕು ತೋರಿಸಿ ಬೆದರಿಕೆ…!!

ವ್ಯಕ್ತಿಯೋರ್ವರಿಗೆ ಚಾಕು ತೋರಿಸಿ ಬೆದರಿಕೆ…!!

ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿ‌ ಸಮೀಪದ ಹೆಜಮಾಡಿ ಕನ್ನಂಗಾರ್ ನ ಹುಸೇನ್ ಎಂಬವರಿಗೆ ವ್ಯಕ್ತಿಯೋರ್ವ ಚಾಕು ತೋರಿಸಿ ಬೆದರಿಕೆ ಹಾಕಿದ ಘಟನೆ ನಡೆದಿದೆ.

ಬೆದರಿಕೆ ಹಾಕಿದ ಆರೋಪಿ ಜಾಕೀರ್ ಹುಸೇನ್ ಎಂದು ಗುರುತಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ಪಿರ್ಯಾದಿದಾರರಾದ ಬಿ.ಎಂ. ಹುಸೇನ್‌ ,ಹೆಜಮಾಡಿ ಗ್ರಾಮ, ಕಾಪು ಇವರು ದಿನಾಂಕ 04/04/2025 ರಂದು ಶುಕ್ರವಾರದ ಜುಮ್ಮಾ ನಮಾಜನ್ನು ಮಾಡಲು ಕಾಫು ತಾಲೂಕು ಹೆಜಮಾಡಿ ಗ್ರಾಮದ ಕನ್ನಂಗಾರ್‌ ಜುಮ್ಮಾ ಮಸೀದಿಗೆ ಬಂದು ನಮಾಜ್‌ ಮಾಡಿ ವಾಪಾಸು ಹೋಗಲು ಮಸೀದಿ ಬಳಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ತನ್ನ ಕಾರಿನಲ್ಲಿ ಕುಳಿತುಕೊಂಡಾಗ ಮದ್ಯಾಹ್ನ 1:30 ಗಂಟೆಗೆ ಆರೋಪಿ ಜಾಕೀರ್‌ ಹುಸೇನ್‌ ಇತರರೊಂದಿಗೆ KA-20-MG-0243 ನೇ ಕಾರಿನಲ್ಲಿ ಬಂದು ಪಿರ್ಯಾದಿದಾರರಿಗೆ ಮುಂದಕ್ಕೆ ಹೋಗದಂತೆ ಅಡ್ಡಗಟ್ಟಿ ಇದು ನಾವು ಪಾರ್ಕ್‌ ಮಾಡುವ ಸ್ಥಳ ನೀನೇಕೆ ಇಲ್ಲಿ ಕಾರು ನಿಲ್ಲಿಸಿದ್ದಿಯಾ ಎಂದು ಬೈದು, ಚಾಕು ತೋರಿಸಿ ಬೆದರಿಕೆ ಹಾಕಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 79/2026 ಕಲಂ: 126(2), 351(2̧), 352 BNS ರಂತೆ ಪ್ರಕರಣ ದಾಖಲಾಗಿರುತ್ತದೆ.