Home Crime ರಾಡ್ ನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ…!!

ರಾಡ್ ನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ…!!

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ವ್ಯಕ್ತಿಯೊಬ್ಬರಿಗೆ ಆರೋಪಿಯೊಬ್ಬ ರಾಡ್ ನಿಂದ ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ.

ಆರೋಪಿ ಮುನಿರ ಎಂಬವ, ಉಮ್ಮರ ಬ್ಯಾರಿ‌ ಎಂಬವರಿಗೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ದಿನಾಂಕ 19/06/2026 ರಂದು ಬೆಳಿಗ್ಗೆ 07:10 ಗಂಟೆಗೆ ಪಿರ್ಯಾದಿದಾರರಾದ ಉಮ್ಮರ ಬ್ಯಾರಿ (72), ರಾಹುತನಕಟ್ಟೆ ಯಡ್ತರೆ ಗ್ರಾಮ ಇವರು ಯಡ್ತರೆ ಗ್ರಾಮದ ರಾಹುತೇಶ್ವರ ಹೋಟೆಲ್‌ ಎದುರು ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಮುನಿರ, ರಾಹುತನಕಟ್ಟೆ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಆತನ ಕೈಯಲ್ಲಿದ್ದ ಕಬ್ಬಿಣದ ರಾಡ್‌ ನಿಂದ ಪಿರ್ಯಾದಿದಾರರ ಕೈಗೆ ಹೊಡೆದು ಕೈಯಿಂದ ದೂಡಿ ಹಾಕಿ ಕೆಳಗೆ ಬಿಳಿಸಿ ಕುತ್ತಿಗೆ ಮತ್ತು ಸೊಂಟಕ್ಕೆ ಕೈಯಿಂದ ಹೊಡೆದು ಗಾಯಗೊಳಿಸಿ ಜೀವ ಬೆದರಿಕೆ ಹಾಕಿ ಅಲ್ಲಿಂದ ಹೋಗಿರುವುದಾಗಿದೆ. ಮತ್ತೆ ಆರೋಪಿಯು ದಿನಾಂಕ 22/06/2026 ರಂದು ಸಂಜೆ 05:00 ಗಂಟೆಗೆ ಪಿರ್ಯಾದಿದಾರರ ಮನೆಗೆ ಬಂದು ಪಿರ್ಯಾದಿದಾರರನ್ನು ಮತ್ತು ಅವರ ಹೆಂಡತಿಯನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಹೋಗಿರುವುದಾಗಿದೆ. ದಿನಾಂಕ 23/06/2026 ರಂದು ಬೆಳಿಗ್ಗೆ ನೋವು ಜಾಸ್ತಿಯಾಗಿದ ಪರಿಣಾಮ ಪಿರ್ಯಾದಿದಾರರು ಈ ಬಗ್ಗೆ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಮಗನೊಂದಿಗೆ ಬಂದು ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 86/2026 ಕಲಂ: 126, 115(1), 118(1), 352, 351(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.