ಉಡುಪಿ : ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿ ನಿಂತಿದ್ದ ಟಿಎಂಟಿ ಬಸ್ಸಿಗೆ ಪಿ ಎಂ ಟಿ ಬಸ್ ಚಾಲಕ ತನ್ನ ಬಸ್ಸನ್ನು ಅಡ್ಡ ತಂದು ನಿಲ್ಲಿಸಿದ ಘಟನೆ ಉಡುಪಿಯ ಸಿಟಿ ಬಸ್ ನಿಲ್ದಾಣದಲ್ಲಿ ನಿನ್ನೆ (ಶನಿವಾರ ) ರಾತ್ರಿ ಸಂಭವಿಸಿದೆ.
ಈ ಘಟನೆಯಿಂದ ಕೋಪಗೊಂಡ ಟಿ ಎಂ ಟಿ ಚಾಲಕ ಪ್ರಯಾಣಿಕರನ್ನು ಬಸ್ ನಿಂದ ಇಳಿಸಿ ಎರಡೆರಡು ಬಾರಿ ಡಿಕ್ಕಿ ಹೊಡೆದು ಹುಚ್ಚಾಟ ಮೆರೆದಿದ್ದಾನೆ.
ಈ ಘಟನೆಯಿಂದ ಬಸ್ ನ ಮುಂಭಾಗದ ಗ್ಲಾಸ್ ಗಳು ಪುಡಿ ಪುಡಿಯಾಗಿದೆ. ಸಾರ್ವಜನಿಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ಸಿಟಿ ಬಸ್ ಗಳ ಪರವಾನಿಗೆ ರದ್ದುಗೊಳಿಸುವಂತೆ ಸಾರ್ವಜನಿಕರ ಆಗ್ರಹ ಪಡಿಸಿದ್ದಾರೆ.






