Home Latest ಬನ್ನಂಜೆ ಅವೈಜ್ಞಾನಿಕ ಡಿವೈಡ‌ರ್ ಮುಚ್ಚುವಂತೆ ಸಾರ್ವಜನಿಕರ ಆಗ್ರಹ…!!

ಬನ್ನಂಜೆ ಅವೈಜ್ಞಾನಿಕ ಡಿವೈಡ‌ರ್ ಮುಚ್ಚುವಂತೆ ಸಾರ್ವಜನಿಕರ ಆಗ್ರಹ…!!

ಉಡುಪಿ : ಬನ್ನಂಜೆಯಲ್ಲಿ ಅವೈಜ್ಞಾನಿಕ ಡಿವೈಡರ್ ತಂದ ಅವಾಂತರದಿಂದ ಬನ್ನಂಜೆ ಬಟ್ಟೆ ಅಂಗಡಿ ಬಳಿ ಸರಣಿ ಅಪಘಾತ ಸಂಭವಿಸಿದೆ.

ಘಟನೆಯ ಪರಿಣಾಮ ಎರಡು ಕಾರುಗಳು ಜಖಂಗೊಂಡಿದೆ. ಈ ಅಕ್ರಮ ಡಿವೈಡರ್‌ನಿಂದ ಪ್ರತಿನಿತ್ಯ ವಾಹನ ಸವಾರರಿಗೆ ಕಿರಿಕಿರಿಯಾಗಿದೆ.

ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ಸೆಕ್ಯೂರಿಚಿ ಗಾರ್ಡ್‌ಗಳು ಪ್ರತಿ ನಿತ್ಯ ಅಡ್ಡಿಯಾಗುತ್ತಿದ್ದಾರೆ. ಇಲ್ಲಿ ಯಾವಾಗಲು ವಾಹನ ಅಫಘಾತಗಳು ನಡೆಯುತ್ತಿವೆ.ಇಲ್ಲಿ ನಡೆಯುತ್ತಿರುವ ಅಪಘಾತಗಳಿಗೆ ಜೆಲ್ಲಾಡಳಿತವೇ ನೇರ ಹೊಣೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಅನಧಿಕೃತ ಡಿವೈಡರ್ ಮುಚ್ಚುವಂತೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಕ್ರಮ ಕೈಗೊಳ್ಳದ ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.