ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಕಸ ಹಾಕಿದ ವಿಚಾರದಲ್ಲಿ ವ್ಯಕ್ತಿಯೋರ್ವರಿಗೆ ಮೂವರು ಬಂದು ಅಂಗಡಿಯಲ್ಲಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಹಲ್ಲೆಗೊಳಾಗದ ವ್ಯಕ್ತಿ ಅಣ್ಣಯ್ಯ ಪೊಂಡೆ ಎಂದು ತಿಳಿದು ಬಂದಿದೆ.
ಹಲ್ಲೆ ಮಾಡಿದ ಆರೋಪಿಗಳು 1)ಅಮ್ರತ್ ಪೊಂಡೆ, 2)ರಿತೇಶ್ ಪೊಂಡೆ, 3)ನಮನ ಪೊಂಡೆ ಎಂದು ತಿಳಿಯಲಾಗಿದೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ: ಪಿರ್ಯಾದಿದಾರರಾದ ಸಹನಾ ಪೊಂಡೆ (40), ಖಾರ್ವಿಕೇರಿ ಕಸಬಾ ಗ್ರಾಮ ಕುಂದಾಪುರ ಇವರ ಗಂಡ ಅಣ್ಣಯ್ಯ ಪೊಂಡೆ ರವರು ದಿನಾಂಕ 17/11/2025 ರಂದು ಸಂಜೆ 6:15 ಗಂಟೆಗೆ ಕುಂದಾಪುರ ತಾಲೂಕು ಕಸಬಾ ಗ್ರಾಮದ ಖಾರ್ವಿಕೇರಿ ಎಂಬಲ್ಲಿ ಅಂಗಡಿಯಲ್ಲಿರುವಾಗ ಆರೋಪಿಗಳಾದ 1)ಅಮ್ರತ್ ಪೊಂಡೆ, 2)ರಿತೇಶ್ ಪೊಂಡೆ, 3)ನಮನ ಪೊಂಡೆ ಇವರು ಅಕ್ರಮ ಪ್ರವೇಶ ಮಾಡಿ ಕಸ ಹಾಕಿದ ವಿಚಾರದಲ್ಲಿ ಏಕಾಎಕಿ ಕೈಯಿಂದ ಹೊಡೆದು ಕಾಲಿನಿಂದ ತುಳಿದಿದ್ದು ಆಗ ಬಿಡಿಸಲು ಹೋದ ಪಿರ್ಯಾದಿದಾರರಿಗೂ ಆರೋಪಿಗಳು ಹೊಡೆದು ಆರೋಪಿ ರಿತೇಶನು ಕೆಂಪು ಕಲ್ಲು ತುಂಡಿನಿಂದ ಪಿರ್ಯಾದಿದಾರರ ತಲೆಗೆ ಹೊಡೆದು ಗಾಯವುಂಟುಮಾಡಿದ್ದು ಈ ಬಗ್ಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 141/2025 ಕಲಂ:329(4), 115(2),118(1), 352, 351(2) R/W 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.



