Home Karavali Karnataka ಉದ್ಯಾವರ ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಇಂಟರ್ ಲಾಕ್ ಕಾಮಗಾರಿ : ಉದ್ಘಾಟನೆ…!!

ಉದ್ಯಾವರ ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಇಂಟರ್ ಲಾಕ್ ಕಾಮಗಾರಿ : ಉದ್ಘಾಟನೆ…!!

ಉಡುಪಿ : ಉದ್ಯಾವರ ಕೇದಾರ್ ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಇಂಟರ್ ಲಾಕ್ ಅಳವಡಿಕೆ ಕಾಮಗಾರಿಗೆ ಶಾಸಕರ ಶಿಫಾರಸ್ಸಿನ ಮೇರೆಗೆ ಧಾರ್ಮಿಕ ದತ್ತಿ ಇಲಾಖೆಯಿಂದ 5 ಲಕ್ಷ ರೂಪಾಯಿ ಅನುದಾನ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದ್ದು ಇದರ ಉದ್ಘಾಟನೆಯನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಗರಡಿ ಅಧ್ಯಕ್ಷರಾದ ದಿನೇಶ್ ಸಾಲಿಯಾನ್, ಭಗವತಿ ಸಮಾಜದ ಅಧ್ಯಕ್ಷರಾದ ಶಂಕರ್ ಪಾಲನ್, ಗ್ರಾಮದ ಹಿರಿಯರಾದ ಸುಂದರ ಕೋಟ್ಯಾನ್, ವಿಶಾಲಾಕ್ಷಿ ಶಿವರಾಮ ಶೆಟ್ಟಿ, ವಿ ಎಚ್ ಪಿ ಅಧ್ಯಕ್ಷರಾದ ವಿಶ್ವನಾಥ್ ಕೋಟ್ಯಾನ್, ಅರ್ಚಕರಾದ ಸುಧೀಂದ್ರ ಉಪಾಧ್ಯಾಯ, ಉದ್ಯಾವರ ಗ್ರಾಮ ಗ್ರಾಮ ಪಂಚಾಯತ್ ಸದಸ್ಯರಾದ ಮಿತೇಶ್ ಸುವರ್ಣ, ಜಿತೇಂದ್ರ ಶೆಟ್ಟಿ, ಸರೋಜಾ ಸುಧಾಕರ, ವನಿತಾ ಶೆಟ್ಟಿ, ವೀಣಾ ಶ್ರೀಧರ್, ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ಸಂತೋಷ ಸುವರ್ಣ, ಸದಸ್ಯರಾದ ವಾರಿಜಾಜಯ ಕುಮಾರ್, ಕುಸುಮ ವಿಶ್ವನಾಥ್, ಪರಮೇಶ್ವರ, ಜಯಕರ ಗಾಣಿಗ, ರಮೇಶ ಶೆಟ್ಟಿ, ದಿನೇಶ್ ಕೋಟ್ಯಾನ್, ಪ್ರವೀಣ್ ಉಮಾನ್ ಪಾಡಿ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.