Home Crime ಮಲ್ಪೆ : ವ್ಯಕ್ತಿಯೋರ್ವರು‌ ನಾಪತ್ತೆ…!!

ಮಲ್ಪೆ : ವ್ಯಕ್ತಿಯೋರ್ವರು‌ ನಾಪತ್ತೆ…!!

ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆಯ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರು ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದ ವ್ಯಕ್ತಿ ಸುಭಾಸ್ ಭಂಡಾರಿ‌ ಎಂದು ತಿಳಿದು ಬಂದಿದೆ.

ಮಲ್ಪೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಸಾರಾಂಶ : ಪಿರ್ಯಾದಿದಾರರಾದ ಲಲಿತಾ, ಯಡ್ತರೆ ಗ್ರಾಮ, ಬೈಂದೂರು ಇವರ ಗಂಡ ಸುಭಾಸ್‌ ಭಂಡಾರಿ (45) ರವರು ಸುಮಾರು 7-8 ವರ್ಷಗಳಿಂದ ಮಲ್ಪೆಯ ಮಹಾಲಕ್ಷ್ಮೀ ಹೋಟೆಲ್‌ ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದು, ದಿನಾಂಕ 15/11/2025 ರಂದು ಕರೆ ಮಾಡಿ ಪಿರ್ಯಾದಿದಾರರ ಹಾಗೂ ಅವರ ಮಗನ ಯೋಗಕ್ಷೇಮ ವಿಚಾರಿಸಿ ಫೋನ್ ಕಟ್‌ ಮಾಡಿರುತ್ತಾರೆ. ನಂತರ ದಿನಾಂಕ 16/11/2025 ರಂದು ಮದ್ಯಾಹ್ನವಾದರೂ ಪೋನ್‌ ಮಾಡದೇ ಇದ್ದು ಮೊಬೈಲ್ ಸ್ವಿಚ್‌ ಆಫ್‌ ಆಗಿರುತ್ತದೆ. ನಂತರ ಮಹಾಲಕ್ಷ್ಮೀ ಹೊಟೇಲ್‌ ನ ಮಾಲೀಕರಾದ ವಿಶ್ವನಾಥ ರವರು ಪಿರ್ಯಾದಿದಾರರಿಗೆ ಕರೆ ಮಾಡಿ ಸುಭಾಸ್‌ ರವರು ಹೊಟೆಲ್‌ ನಲ್ಲಿ ಮದ್ಯಾಹ್ನದ ಅಡುಗೆ ತಯಾರಿಸಿ ನಂತರ ಅಂಗಡಿಗೆ ಹೋಗಿ ಸಾಮಾನು ತರುವುದಾಗಿ ಹೇಳಿ ಹೋದವರು ಈ ವರೆಗೂ ವಾಪಾಸು ಬಂದಿಲ್ಲವೆಂದೂ, ಮನೆಗೆ ಬಂದಿರುವ ಬಗ್ಗೆ ವಿಚಾರಿಸಿದಾಗ ಸುಭಾಸ್‌ ರವರು ನಾಪತ್ತೆಯಾಗಿರುವ ವಿಚಾರ ತಿಳಿದು ಬಂದಿರುತ್ತದೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 126/2025 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.