Home Latest ವಾರಸುದಾರರು ಪತ್ತೆಯಾಗದಿರುವ ಎರಡು ಶವಗಳ ದಫನ.`

ವಾರಸುದಾರರು ಪತ್ತೆಯಾಗದಿರುವ ಎರಡು ಶವಗಳ ದಫನ.`

.`ಉಡುಪಿ, ಜು.1; ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದ ಶೀತಲೀಕರಣ ಘಟಕದಲ್ಲಿ ಕಳೆದ, ಐವತ್ತು ದಿನಗಳಿಂದ ರಕ್ಷಿಸಿಡಲಾಗಿದ್ದ, ಎರಡು ಪುರುಷ‌‌ ಕಳೇಬರಗಳ‌ ದಫನ ಕಾರ್ಯವು ಬೀಡಿನಗುಡ್ಡೆಯ ದಫನಭೂಮಿಯಲ್ಲಿ ಗೌರವಯುತವಾಗಿ ಸೋಮವಾರ ನಡೆಸಲಾಯಿತು.

 

ಇರ್ವರು ರೋಗಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಇರ್ವರು ರೋಗಿಗಳನ್ನು ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದರು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಮೃತರು ವಾರಸುದಾರರ ಪತ್ತೆಗೊಳಿಸಲು ಮಾಧ್ಯಮ ಪ್ರಕಟಣೆ ನೀಡಿಯೂ, ವಾರಸುದಾರರು ಪತ್ತೆಯಾಗದೆ ಇರುವುದರಿಂದ‌, ಕಾನೂನು ಪ್ರಕ್ರಿಯೆ ನಡೆದಾದ ಬಳಿಕ, ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ‌ ಒಳಕಾಡು ಅವರಡ ನೇತ್ರತ್ವದಲ್ಲಿ ದಫನ ಕಾರ್ಯವನ್ನು ಪೋಲಿಸರು ನಡೆಸಿದರು.

ನಗರ ಪೋಲಿಸ್ ಠಾಣೆಯ‌ ಮುಖ್ಯ ಆರಕ್ಷಕಿ ಜಾಸ್ವ, ಆರಕ್ಷಕ ಮಲ್ಲಿಕಾರ್ಜುನ ಮಹಜರು ಕಾನೂನು ಪ್ರಕ್ರಿಯೆ ನಡೆಸಿದರು. ನಾಗರಿಕ ಸಮಿತಿಯ ಕಾರ್ಯಕರ್ತರಾದ ದೇವಿಕಿ ಬಾರ್ಕೂರು, ವಸಂತಿ ಸಾಸ್ತಾನ, ಸತೀಶ್ ಕುಮಾರ್, ವಿಕಾಸ್ ಶೆಟ್ಟಿ ಭಾಗಿಯಾಗಿದ್ದರು. ದಫನ ಕಾರ್ಯ‌ ನೆರವೇರಲು ಫ್ಲವರ್ ವಿಷ್ಣು, ಪ್ರಕಾಶ್ ಭಟ್, ನಗರಸಭೆ, ಜಿಲ್ಲಾಸ್ಪತ್ರೆ, ಸಹಕಾರ ನೀಡಿತ್ತು.