Home Latest ಡಾನ್ ರವಿ ಪೂಜಾರಿ ಅಮ್ಮ ಸುಶೀಲಾ ಪೂಜಾರ್ತಿ ಹೃದಯಾಘಾತದಿಂದ ನಿಧನ…!!

ಡಾನ್ ರವಿ ಪೂಜಾರಿ ಅಮ್ಮ ಸುಶೀಲಾ ಪೂಜಾರ್ತಿ ಹೃದಯಾಘಾತದಿಂದ ನಿಧನ…!!

ಉಡುಪಿ : ಡಾನ್ ರವಿ ಪೂಜಾರಿ ಅವರ ತಾಯಿ ಸುಶೀಲಾ ಪೂಜಾರ್ತಿ ಹೃದಯಾಘಾತದಿಂದ ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ.

ಸುಶೀಲಾ ಪೂಜಾರ್ತಿ ಅವರಿಗೆ 86 ವರ್ಷ ವಯಸ್ಸು ಆಗಿತ್ತು. ಅವರಿಗೆ  ಐದು ಮಕ್ಕಳು, ಅದರಲ್ಲಿ  ಇಬ್ಬರು ಹುಡುಗಿಯರು, ರವಿ ಪೂಜಾರಿ ಸೇರಿದಂತೆ ಮೂವರು ಗಂಡು ಮಕ್ಕಳು.

ನಾಳೆ ಅವರ ಹಿರಿಯ ಮನೆ ಮಲ್ಪೆಯ ನೆರ್ಗಿಯಲ್ಲಿ ಬೆಳಿಗ್ಗೆ 9:30 ಕ್ಕೆ ಅಂತ್ಯ ಸಂಸ್ಕಾರ ನಡೆಯಲಿದೆ.

ರವಿ ಪೂಜಾರಿಯನ್ನು ಬೆಂಗಳೂರು ಪರಪ್ಪನ ಅಗ್ರಹಾರ ಜೈಲ್ ನಿಂದ ತಾಯಿಯ ಅಂತ್ಯ ಸಂಸ್ಕಾರಕ್ಕೆ ಕರೆ ತರಲು ಪ್ರಯತ್ನ ನಡೆಯುತ್ತಿದೆ.ಮನೆಯವರ ಬೆಂಗಳೂರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತೀರ್ಪು ಇನ್ನು ಬರಬೇಕು.