Home Dskshina Kannada ವಿಪರೀತ ಕುಡಿತದ ಚಟಕ್ಕೆ ಬಿದ್ದ ವ್ಯಕ್ತಿ ನಾಪತ್ತೆ…!!

ವಿಪರೀತ ಕುಡಿತದ ಚಟಕ್ಕೆ ಬಿದ್ದ ವ್ಯಕ್ತಿ ನಾಪತ್ತೆ…!!

ಬಂಟ್ವಾಳ : ವಿಪರೀತ ಕುಡಿತದ ಚಟ ಹೊಂದಿದ್ದ ವ್ಯಕ್ತಿಯೋರ್ವ ಕೆಲಸಕ್ಕೆಂದು ಹೋದಲ್ಲಿಂದ ವಾಪಸು ಮನೆಗೆ ಬರದೆ ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೂಲತಃ ಬೆಂಜನಪದವು ನಿವಾಸಿಯಾಗಿರುವ ಈತ ರಾಯಿ ಕುಟ್ಟಿಕಳ ಪತ್ನಿ ಮನೆಯಲ್ಲಿ ವಾಸವಾಗಿದ್ದ. ರಾಜೇಶ್ (37) ಎಂಬಾತ ನಾಪತ್ತೆಯಾದ ವ್ಯಕ್ತಿಯಾಗಿದ್ದಾನೆ.

ಕಳೆದ ಐದಾರು ತಿಂಗಳಿನಿಂದ ವಿಪರೀತ ಕುಡಿತದ ಚಟಕ್ಕೆ ಬಿದ್ದ ಈತ ಮನೆಯಲ್ಲಿ ಪತ್ನಿ ಜೊತೆ ನಿತ್ಯ ಗಲಾಟೆ ಮಾಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಜೂನ್ 9 ರಂದು ಬೆಳಿಗ್ಗೆ ಕೆಲಸಕ್ಕೆಂದು ಈತ ಗುರುಪುರ ಕೈಕಂಬಕ್ಕೆ ಹೋಗಿದ್ದು, ಮನೆಗೆ ವಾಪಸು ಬರದೆ ಪೋನ್ ಸ್ವಿಚ್ ಆಫ್ ಆಗಿದೆ ಎಂದು ಈತನ ಪತ್ನಿ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಾಳೆ.