ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಅಜೆಕಾರು ಬೊಂಡುಕುಮೇರಿಯಲ್ಲಿ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬೊಂಡುಕುಮೇರಿ ದೊಡ್ಡಪಲ್ಕೆ ನಿವಾಸಿ ಧರಣೇಂದ್ರ(27) ಆತ್ಮಹತ್ಯೆ ಮಾಡಿಕೊಂಡ ಯುವಕ.
ಧರಣೇಂದ್ರ ಫಿಜಿಯೋಥೆರಪಿ ಡಿಗ್ರಿ ಮುಗಿಸಿ ಸುಮಾರು 1 ವರ್ಷದಿಂದ ಮನೆಯಲ್ಲಿಯೇ ಇದ್ದ.
ನ.12 ರಂದು ತಾಯಿಯನ್ನು ಡಯಾಲಿಸಿಸ್ ಗೆಂದು ಕಾರ್ಕಳ ಡಾ.ಟಿ.ಎಂ.ಎ ಪೈ ಆಸ್ಪತ್ರೆಗೆ ಬಿಟ್ಟು ಮನೆಗೆ ವಾಪಾಸಾಗಿದ್ದ.
ಆ ವೇಳೆ ಮನೆಯಲ್ಲಿದ್ದ ತಂದೆಯೂ ಕೆಲಸದ ನಿಮಿತ್ತ ಮನೆಯಿಂದ ಹೊರಹೋಗಿದ್ದರು. ಇತ್ತ ತಾಯಿ ಚಿಕಿತ್ಸೆ ಮುಗಿಸಿ ಮಗನಿಗೆ ಕರೆ ಮಾಡಿದಾಗ ಆತ ಕರೆ ಸ್ವೀಕರಿಸಿರಲಿಲ್ಲ.
ಬಳಿಕ ಆತನ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ತಂದೆಯೂ ಕರೆ ಮಾಡಿದಾಗ ಕರೆ ಸ್ವೀಕರಿಸದ ಹಿನ್ನೆಲೆ ಅನುಮಾನಗೊಂಡು ಅಣ್ಣನ ಬಳಿ ನೋಡುವಂತೆ ತಿಳಿಸಿದ್ದರು.
ಅವರು ಮನೆಗೆ ಹೋಗಿ ನೋಡಿದಾಗ ಧರಣೇಂದ್ರ ಮನೆಯ ಬೆಡ್ರೂಮ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



