Home Crime ತ್ರಾಸಿ: ಹೋಂಗಾರ್ಡ್‌ ಗೆ ಬೈಕ್ ಢಿಕ್ಕಿ : ಗಾಯ…!

ತ್ರಾಸಿ: ಹೋಂಗಾರ್ಡ್‌ ಗೆ ಬೈಕ್ ಢಿಕ್ಕಿ : ಗಾಯ…!

ಗಂಗೊಳ್ಳಿ : ಕರ್ತವ್ಯದಲ್ಲಿದ್ದ ಹೋಂಗಾರ್ಡ್‌ವೊಬ್ಬರು ಮಧ್ಯಾಹ್ನ ಊಟಕ್ಕೆಂದು ಮನೆಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದ ವೇಳೆ ಬೈಕ್‌ ಢಿಕ್ಕಿಯಾಗಿ ಗಂಭೀರ ಗಾಯಗೊಂಡ ಘಟನೆ ತ್ರಾಸಿ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ.

ಗುಜ್ಜಾಡಿ ನಿವಾಸಿ ಹೋಂಗಾರ್ಡ್ ಪ್ರತಿಮಾ ಗಾಯಗೊಂಡವರು.

ಇವರು ತ್ರಾಸಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ ಬೈಂದೂರು ಕಡೆಯಿಂದ ಬಂದ ಕಿಶನ್ ಚಲಾಯಿಸುತ್ತಿದ್ದ ಬೈಕ್ ಢಿಕ್ಕಿಯಾಗಿದೆ. ಗಾಯಾಳುವನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.