ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲ ಸಮೀಪದ ಅಲೆವೂರಿನ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದ ವ್ಯಕ್ತಿ ಕಾಣೆಯಾದ ಘಟನೆ ನಡೆದಿದೆ.
ಕಾಣೆಯಾದವರನ್ನು ಅಲೆವೂರು ನಿವಾಸಿ ಕುಮಾರ ಕೃಷ್ಣ (47) ಎಂದು ಗುರುತಿಸಲಾಗಿದೆ. ಅವರು ತಮ್ಮ ಅಣ್ಣ ಸುಬ್ರಹ್ಮಣ್ಯ ಉಪಾಧ್ಯ (55) ಅವರೊಂದಿಗೆ ವಾಸವಿದ್ದರು. ಉಡುಪಿಯ ನೂತನ್ ಸಿಲ್ಕ್ ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು.
19 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಕುಮಾರ ಕೃಷ್ಣ, ಸೆಪ್ಟೆಂಬರ್ 13ರಂದು ಬೆಳಿಗ್ಗೆ 10:30ಕ್ಕೆ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಹೋದವರು ಅಕ್ಟೋಬರ್ 7ರವರೆಗೂ ವಾಪಸ್ ಬಂದಿಲ್ಲ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 163/2026 ರಂತೆ ಗಂಡಸು ಕಾಣೆಯಾದ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಚಹರೆ:
ಹೆಸರು: ಕುಮಾರ ಕೃಷ್ಣ, 47 ವರ್ಷ, ಎತ್ತರ ಸುಮಾರು 5.5 ಅಡಿ. ಮಾನಸಿಕ ಅಸ್ವಸ್ಥರು.
ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮಣಿಪಾಲ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.



