ಉಡುಪಿ: ಉಡುಪಿಯ ಅತ್ಯಂತ ಹಿರಿಯ ಮತ್ತು ಪ್ರಸಿದ್ಧ ಗಣೇಶೋತ್ಸವಗಳಲ್ಲಿ ಒಂದಾದ ಕಡಿಯಾಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ*ಯ ”ಉಡುಪಿಯ ರಾಜ – ಕಡಿಯಾಳಿ ಸಂಕಷ್ಟಹರ ಗಣೇಶ’ ನ 60ನೇ ವರ್ಷದ ವಜ್ರ ಮಹೋತ್ಸವದ ಸಂಭ್ರಮಕ್ಕೆ ಚಾಲನೆ ಸಿಕ್ಕಿದೆ.
ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆ:
ಸೆಪ್ಟೆಂಬರ್ 13ರಂದು ಸಂಜೆ 4:30ಕ್ಕೆ ಜೋಡುಕಟ್ಟೆಯಿಂದ ಗಣಪತಿ ವಿಗ್ರಹದ ಅದ್ದೂರಿ ಮೆರವಣಿಗೆ ನಡೆಯಿತು. ನೂರಾರು ಭಕ್ತರ ಜಯಘೋಷ, ಚೆಂಡೆ-ವಾದ್ಯಗಳೊಂದಿಗೆ ಗಣೇಶನಿಗೆ ಜೋಡುಕಟ್ಟೆಯಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.
ಡಾ. ಟಿ.ಎಂ.ಎ. ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ಸೆ.14 ರಿಂದ 20ರವರೆಗೆ ವಜ್ರ ಮಹೋತ್ಸವ:
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮಿತಿ ಗೌರವಾಧ್ಯಕ್ಷ ಹಾಗೂ ಶಾಸಕ ಯಶಪಾಲ್ ಎ. ಸುವರ್ಣ ಅವರು, ಸೆ.14 ರಿಂದ 20ರವರೆಗೆ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಕಾತ್ಯಾಯಿನಿ ಮಂಟಪದಲ್ಲಿ 60ನೇ ಶ್ರೀಗಣೇಶೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಈ ಬಾರಿ ವಿಶೇಷವಾಗಿ ಭವ್ಯ ‘ರಾಜ ದರ್ಬಾರ್’l ವೇದಿಕೆ ನಿರ್ಮಿಸಲಾಗಿದ್ದು, ಇಲ್ಲಿ ಗಣಪತಿ ಏಳು ದಿನಗಳ ಕಾಲ ರಾಜನಂತೆ ವಿರಾಜಮಾನನಾಗಿ ಭಕ್ತರಿಗೆ ಅನುಗ್ರಹ ನೀಡಲಿದ್ದಾನೆ.
ಕಡಿಯಾಳಿ ಸಂಪರ್ಕಿಸುವ ನಾಲ್ಕು ಪ್ರಮುಖ ರಸ್ತೆಗಳಲ್ಲಿ ಸ್ವಾಗತ ಕಮಾನು, ಕೇಸರಿ ಧ್ವಜ, ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ಚಿನ್ನದ ಕಿರೀಟ, ಪಾಶಾಂಕುಶ ಸೇರಿದಂತೆ ಆಭರಣಗಳಿಂದ ಅಲಂಕೃತಗೊಂಡ ಮೂರ್ತಿಯನ್ನು ಇಂದಿರಾನಗರದ ಇಂಜಿನಿಯರ್ ಸಂಪತ್ ರಾವ್ ರಚಿಸಿದ್ದಾರೆ. 9fb9
ಉತ್ಸವದಲ್ಲಿ ಸಿನಿಮಾ ಹಾಡುಗಳಿಗೆ ನಿಷೇಧವಿದ್ದು, ಭಕ್ತಿ-ಶ್ರದ್ಧೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸೆ.17ರಂದು ಕುಣಿತ ಭಜನಾ ಸ್ಪರ್ಧೆ, ಸೆ.20ರಂದು ಸಮಾರೋಪ ಸಮಾರಂಭ ನಡೆಯಲಿದೆ.





